suddibindu
Honnavara:ಹೊನ್ನಾವರ : ಮಹಿಳೆ ಓರ್ವಳು ಮನೆಯಲ್ಲಿ ಬಟ್ಟೆ ಧರಿಸುವ ವೇಳೆ ಆಕೆಯ ನಗ್ನ ವೀಡಿಯೋ ಒಂದನ್ನ ಸೆರೆ ಹಿಡಿದು ಸಾಮಾಜಿ ಜಾಲತಾಣದ ಮೂಲಕ ವಿಶ್ವಕ್ಕೆ ಹರಿಬಿಟ್ಟು ವಿಕೃತಕಾಮಿ ವಿರುದ್ಧ ವಿಶ್ವನಾಥ ನಾಯ್ಕ ಎಂಬಾತ ವಿರುದ್ಧ ದೂರು ದಾಖಲಾಗಿದೆ.
ಹೊನ್ನಾವರ ತಾಲೂಕಿನ ಜಡ್ಡಿಗದ್ದೆ ನಿವಾಸಿಯಾಗಿರುವ ಮಹಿಳೆ ಮನೆಯಲ್ಲಿ ಬಟ್ಟೆ ಬದಲಿಸುವ ವೇಳೆ, ಅಲ್ಲಿನ ನಿವಾಸಿ ವಿಶ್ವನಾಥ ಗಣೇಶ ನಾಯ್ಕ ಎಂಬಾತ ವಿಕೃತಕಾಮಿ ತನ್ನ ಮೊಬೈಲ್‌ನಲ್ಲಿ ಆಕೆ ಬಟ್ಟೆ ಬದಲಿಸುವ ವೇಳೆ ಬೆತ್ತಲಾಗಿದ್ದ ವೀಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಈತ ಕಳೆದ ಅನೇಕ ದಿನಗಳಿಂದ ಆ ಮಹಿಳೆಯ ಮೇಲೆ ಕಣ್ಣು ಹಾಕಿದ್ದ ಎನ್ನಲಾಗಿದೆ. ಅಂದು ಮಹಿಳೆಯ ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿ ಆಕೆಯ ಮನೆಬಳಿ ಅವಿತು ಕುಳಿತುಕೊಂಡಿದ್ದನಂತೆ. ಆಕೆ ಬಟ್ಟೆ ಬದಲಿಸುವುದನ್ನೆ ಕಾಯುತ್ತಿದ್ದ ಈ ವಿಶ್ವ ವೀಡಿಯೋ ಸೆರೆ ಹಿಡಿದಿದ್ದಾನೆ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಆ ಮಹಿಳೆಯ ಅಶ್ಲೀಲ ವೀಡಿಯೋವನ್ನ ಸ್ಥಳೀಯರಾದ ತಿಮ್ಮಣ್ಣ ಗಣಪತಿ ಭಂಡಾರಿ ವಾಟ್ಸಪ್ ಕಳುಹಿಸಿದ್ದಾನೆ.ಈತ ಕೃತ್ಯವನ್ನ ತಿಳಿದ ಮಹಿಳೆ ಆರೋಪಿ ತನಾದ ವಿಶ್ವನಾಥ ಗಣೇಶ ನಾಯ್ಕನಿಗೆ ಪೋನ್ ಮಾಡಿ ವಿಚಾರಿಸಿದ್ದಾಳೆ. ಪೋನ್ ಸ್ವೀಕರಿಸಿದ ಮಾಹನ್ ವ್ಯಕ್ತಿ ಮಹಿಳೆಗೆ ಜೀವ ಬೆದರಿಕೆ ಹಾಕಿರುವುದಾಗಿ ಆಕೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈತ ಈ ಹಿಂದೆ ಮಾಡಿದ ಅನೇಕ ಕಳ್ಳಕೃತ್ಯಗಳು ಬೆಳಕಿಗೆ ಬರಲಾರಂಭಿಸಿದೆ.