suddibindu.in
Yallapura:ಯಲ್ಲಾಪುರ: ನಿನ್ನೆಯಷ್ಟೆ ಯಲ್ಲಾಪುರ ಪಟ್ಟಣ ಪಂಚಾಯತದ ನೂತನ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡ ನರ್ಮದಾ ರವಿಂದ್ರ ನಾಯ್ಕ ಅವರು ಇಂದಿರಾ ಕ್ಯಾಂಟಿನ್‌ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಳಪೆ ಕಾಮಗಾರಿಯನ್ನ ವೀಕ್ಷಿಸಿದರು.
ಇಂದು ಪಟ್ಟಣ ಪಂಚಾಯತ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಇಂದಿರಾ ಕ್ಯಾಂಟಿನ್ ಕಾಮಗಾರಿ ಕಳಪೆಯಾಗಿದೆ ಎನ್ನುವ ಬಗ್ಗೆ ಆರೋಪ ಕೇಳಿ ಬಂದಿತ್ತು.ಈ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ದಿಢೀರ್ ಭೇಟಿ ನೀಡಿದ ನರ್ಮದಾ ನಾಯ್ಕ ಅವರು ಕಾಮಗಾರಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
ಪಟ್ಟಣ ಪಂಚಾಯತ್ ಅಧಿಕಾರಿಗಳೊಂದಿಗೆ ಪಾರ್ಮ ನಂಬರ್ 3ಹಾಗೂ ತೆರಿಗೆ ವಿಭಾಗದಲ್ಲಿ ಇರುವ ಅವ್ಯವಸ್ಥೆಯ ಕುರಿತು ಚರ್ಚಿಸಿ ಕೆಲವು ಬದಲಾವಣೆಯ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು. ಪಟ್ಟಣ ಪಂಚಾಯತದಿಂದ 6ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ ಮೇಲ್ಚಾವಣಿ ನಿರ್ಮಾಣ ಮಾಡಲಾಗಿತ್ತು.ಆದರೆ ಈ ಕಾಮಗಾರಿ ಕಳಪೆ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲೆ ತಯಾರಿಸಲಾಗಿದ್ದ ಊಟ ಮಾಡಿ ಅಡುಗೆಯ ರುಚಿಯ ಕುರಿತು ಬೇಸರ ವ್ಯಕ್ತಪಡಿಸಿದರು. ಅಡುಗೆ ಕೋಣೆಯಲ್ಲಿ ಸುಚಿತ್ವ ಇಲ್ಲದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕ್ಯಾಂಟಿನಲ್ಲಿರುವ ಪ್ರೀಜ್ ಸೇರಿದಂತೆ ಲಕ್ಷಾಂತರ ಸಾಮಗ್ರಿಗಳು ಕೆಟ್ಟು ಹೋಗಿರುವುದನ್ನ ಗಮನಿಸಿದ ಅಧ್ಯಕ್ಷರು ಪಟ್ಟಣ ಪಂಚಾಯತ್ ಅನುದಾನದಲ್ಲಿ ಎಲ್ಲವನ್ನ ಸರಿಪಡಿಸುವಂತೆ ಸೂಚಿಸಿದರು.
ಈ ವೇಳೆ ಪ ಪಂ ಸದಸ್ಯರಾದ ಸತೀಶ ನಾಯ್ಕ,ರಾಜು ನಾಯ್ಕ ಸಹ ಅಧ್ಯಕ್ಷರೊಂದಿಗೆ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಲ್ಛಾವಣಿ ಕಳಪೆ
ಪಟ್ಟಣ ಪಂಚಾಯತ ಅನುದಾನದಲ್ಲಿ ನಿರ್ಮಿಸಲಾದ 6 ಲಕ್ಷ ಮೌಲ್ಯದ ಮೇಲ್ಚಾವಣಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ಸೋರುವಂತಾಗಿದೆ..ಇದಕ್ಕೆ ಗುತ್ತಿಗೆದಾರರೆ ಕಾರಣವಾಗಿದ್ದು, ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಬೇಕು. ಹಾಗೆ ಬಾಕಿ ಉಳಿದಿರುವ ಬಿಲ್ ನೀಡದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಗಾವಡೆ ಅವರಿಗೆ ಸೂಚಿಸಿದರು.
ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಸತೀಶ ಶಿವಾನಂದ ನಾಯ್ಕ,ರಾಜು ನಾಯ್ಕ ಸಹ ಹಾಜರಿದ್ದರು.