ಪ್ರಿಯ ಓದುಗರೇ, ನೀವೆಲ್ಲರೂ ಪ್ರೀತಿಯಿಂದ ಸುದ್ದಿಬಿಂದು''ವನ್ನು ಒಪ್ಪಿ-ಅಪ್ಪಿಕೊಂಡ ಪರಿಣಾಮ ನಿಮ್ಮಸುದ್ದಿಬಿಂದು”ಇದೀಗ ನಾಲ್ಕು ಲಕ್ಷ ಓದುಗರನ್ನು ದಾಟಿ ಮುಂದೆ ಸಾಗುತ್ತಿದೆ ಹೇಳಲು ಹೆಮ್ಮೆಯಾಗುತ್ತಿದೆ.

ಸುದ್ದಿಬಿಂದು'' ಓದುಗರಿಗೆ ಪ್ರತೀ ಸುದ್ದಿಯನ್ನು ವೇಗವಾಗಿ ಕೊಡುವ ಕೆಲಸ ಮಾಡುತ್ತಿದೆ.ಓದುಗರು ಅಷ್ಟೇ ಪ್ರೀತಿಯಿಂದ ಸುದ್ದಿಯನ್ನು ಓದುವುದಷ್ಟೇ ಅಲ್ಲ, ಪ್ರೀತಿಯಿಂದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದು ನಮಗೆ ಬಹಳ ಖುಷಿ ನೀಡಿದೆ. ಈ ನಾಡಿನಲ್ಲಿ ಏನೇ ಆದರೂ ನಮ್ಮ ಓದುಗರಿಗೆ ಅದು ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ನಾವು ಪ್ರತೀ ಸುದ್ದಿಯನ್ನು ನಮ್ಮ ಓದುಗರಿಗೆ ತಲುಪಿಸುತ್ತಿದ್ದೇವೆ. ಓದುಗರ ಪ್ರೀತಿಗೆಸುದ್ದಿಬಿಂದು” ಸದಾ ಋಣಿಯಾಗಿರುತ್ತದೆ.

ಇದನ್ನೂ ಓದಿ

ವೆಬ್ ಸೈಟುಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡುವ ಗೂಗಲ್ ಅನಾಲಿಟಿಕ್ಸ್ (Google analytics) ಸ್ಕೋರ್ ಮಾಹಿತಿಯ ಅನ್ವಯ ಸುದ್ದಿಬಿಂದು'' ಒಂದು ವರ್ಷದಲ್ಲಿ ಅತೀ ದೊಡ್ಡ ಸಾಧನೆ ಮಾಡಿದೆ. ಒಂದೇ ತಿಂಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಿದೆ.ಸುದ್ದಿಬಿಂದು” ವೆಬ್ ಸೈಟ್ ನಾಲ್ಕು ಲಕ್ಷಕ್ಕೂ ಅಧಿಕ ಓದುಗರನ್ನು ಹೊಂದಿದೆ. ಪ್ರತೀ ತಿಂಗಳು ಸರಾಸರಿ 4 ಲಕ್ಷಕ್ಕೂ ಹೆಚ್ಚು ಹೊಸ ಹೊಸ ಓದುಗರು ವೆಬ್ ಸೈಟಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಕನ್ನಡ ಮಾಧ್ಯಮದಲ್ಲಿ ನಿಮ್ಮ “ಸುದ್ದಿಬಿಂದು” ಹೊಸ ದಾಖಲೆ ಮಾಡಿದೆ.

ಸುದ್ದಿ ಬಿಂದು ವೆಬ್‌ಸೈಟ್‌ಗಳನ್ನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವೆಬ್ ಡಿಸೈನ್‌ಗಳ ಸಿದ್ದಪಡಿಸಲಾಗಿದೆ.‌ ವೆಬ್‌ಸೈಟ್ ಆರಂಭವಾಗ ಕೆಲವೇ ತಿಂಗಳಲ್ಲಿ ಗೂಗಲ್‌ನ್ಯೂಸ್ (googlenews)ನಲ್ಲಿಯೂ ಓದುಗರಿಗೆ ಸಿಗುವಂತಾಗಿರುವುದು ಹೆಮ್ಮೆಯ ಸಂಗತಿ.ಡಿಜಿಟಲ್ ನ್ಯೂಸ್‌‌(digitalnews) ಮುಖೇನ ಅತೀ ಹೆಚ್ಚು ಓದುಗರನ್ನ ತಲುಪುವ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜಿಲ್ಲೆ ಓದುಗರು ಸೇರಿದಂತೆ ರಾಜ್ಯ-ದೇಶ-ವಿದೇಶದಲ್ಲಿರುವ ಓದುಗರು ತಮ್ಮ ಮೊಬೈಲ್ (mobile), ಆ್ಯಂಡ್ರಾಯಿಡ್(android), ಮೂಲಕ ಕ್ಷಣ ಕ್ಷಣದ ಸುದ್ದಿಯನ್ನ “ಸುದ್ದಿ ಬಿಂದು” ವೆಬ್‌ಸೈಟ್ ಮೂಲಕ ನಿತ್ಯದ ವಿದ್ಯಮಾನಗಳನ್ನ‌ ಇಂದಿನ ಇಂಟರ್ನೆಟ್(internet) ಯುಗದಲ್ಲಿ ಆನ್ ಲೈನ್(online) ಮೂಲಕ ಓದುಗರು, ಜಿಲ್ಲೆ ಹಾಗೂ ನಾಡಿನಾದ್ಯಂತ ನಡೆಯುವ ಪ್ರತಿಕ್ಷಣದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಡಿಜಿಟಲ್ ಮಾರುಕಟ್ಟೆಯ ಬಹುದೊಡ್ಡ ಭಾಗವನ್ನು “ಸುದ್ದಿಬಿಂದು” ಆವರಿಸಿದ್ದು, ಓದುಗರು ಇಟ್ಟಿರುವ ವಿಶ್ವಾಸಾರ್ಹತೆಗೆ ಇದು ಸಾಕ್ಷಿಯಾಗಿದೆ.

-ಸಂ