suddibindu.in
ಕುಮಟಾ; ಸ್ಥಳೀಯ A4 ಮ್ಯೂಜಿಕ ಕ್ರಿಯೇಶನ್ ಇವರ ಆಶ್ರಯದಲ್ಲಿ ಚೂಡಿದಾರದ ಹುಡುಗಿ ಎಂಬ ಶಿರ್ಶೀಕೆಯ ಕನ್ನಡ ವಿಡಿಯೋ ಅಲ್ಬಂ ಸಾಂಗ್ ಹೊರತರಲಿದ್ದಾರೆ.
ತಿಂಗಳು ಅಗಸ್ಟ 18 ರಂದು ಚೂಡಿದಾರದ ಹುಡುಗಿ ಎನ್ನುವ ಶಿರ್ಶೀಕೆಯ A4 ಮ್ಯೂಜಿಕ್ ಕ್ರಿಯೇಶನ್ ಯುಟ್ಯೂಬ್ ನಲ್ಲಿ ಬಿಡುಗಡೆ ಗೊಳ್ಳಲಿದೆ. ಇಲ್ಲಿ ಬರುವ ಎಲ್ಲ ಸನ್ನಿವೇಷಗಳು ಕಾಲ್ಪನಿಕವಾದದ್ದು. ಮುಖ್ಯ ಭೂಮಿಕೆಯಲ್ಲಿ ಕುಮಟಾದ ಯುವ ಕಲಾವಿದರಾದ ಪ್ರಜ್ವಲ್ ನಾಯ್ಕ್ ಮತ್ತು ಅದಿತಿ ಮಡಿವಾಳ ಅಭಿನಯಿಸಿದ್ದಾರೆ. ಸಂಪೂರ್ಣವಾಗಿ ಚಿತ್ರೀಕರಣ ಕುಮಟಾದ ಸುತ್ತ ಮುತ್ತಲಿನ ಪ್ರದೇಶ ಸೆರೆ ಹಿಡಿದ್ದಾರೆ.
ಇದನ್ನು ಓದಿ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ತಂಡದ ಮುಖ್ಯಸ್ಥ ಹೊನ್ನಾವರದ ಶ್ರೀರಾಮ್ ಜಾದೂಗಾರ ರವರು ಎಲ್ಲಿಯೂ ಅತಿಯಾಗಿ ವೈಭವಿಕರಿಸದೇ ಚಿತ್ರೀಕರಣ ಸರಳವಾಗಿ ನಿಭಾಯಿಸಿದ್ದಾರೆ. ಚಿತ್ರೀಕರಣ ಹಾಗೂ ಸ್ಥಿರ ಚಿತ್ರಣ ಅಂಕೋಲಾ ತಾಲೂಕಿನ ದರ್ಶನ ಅವರ್ಸಾ, ನಿರ್ದೇಶನ ಮತ್ತು ಚಿತ್ರಕಥೆ ಸಾಗರದ ತಾಲೂಕಿನ ಸುಹಾಸ ಸಾಗರ, ಅಲ್ಬಂ ಶಿರ್ಶೀಕೆ- ಸಾಹಿತ್ಯ- ಸಂಗೀತ- ಹಾಡುಗಾರಿಕೆ ಅಶೋಕ್ ಪಾಲೇಕರ ಮಾಡಿದ್ದಾರೆ…ನಮ್ಮೇಲ್ಲರ ಪ್ರಥಮ ಪ್ರಯತ್ನ ಇರುವುದರಿಂದ ಬೆಳೆಯುವ ನಮ್ಮ ಪ್ರತಿಭೆಗೆ ಶುಭಹಾರೈಸಲು ಕೋರಿದೆ.