suddibindu.in
ಕಾರವಾರ : ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡಕುಸಿತ ಉಂಟಾಗಿ 16ದಿನಗಳಿಂದ ಹೆದ್ದಾರಿಯಲ್ಲಿ ವಾಹನ ಸಚಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ಸದ್ಯ ಹೆದ್ದಾರಿಯಲ್ಲಿನ ಮಣ್ಣು ತೆರವು ಮಾಡಲಾಗಿದ್ದು, NHಅಧಿಕಾರಿಗಳಿಂದ ಒಪ್ಪಿಗೆ ಬಂದ ಬಳಿಕ ವಾಹನ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ತಿಳಿಸಿದ್ದಾರೆ.
ಗುಡ್ಡದ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಬೇಕು, ಹೆದ್ದಾರಿ ತಡೆಗೋಡೆ, ಸ್ಪಾಟರ್ಸ್ ನಿಯೋಜನೆ ಸೇರಿ ಅಗತ್ಯ ಕ್ರಮಗಳನ್ನ ಜರುಗಿಸಬೇಕು ಎಂದು ಜಿಎಸ್ಐ ವರದಿ ನೀಡಿತ್ತು. ಈ ವರದಿಯನ್ನ ಆಧರಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿ ಹೆದ್ದಾರಿಯಲ್ಲಿ ತುರ್ತು ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು
ಇದನ್ನೂ ಓದಿ
- ಬಿಸಿಯೂಟಕ್ಕೆ ಬೆಳೆ ಇಲ್ಲದೆ ವಿದ್ಯಾರ್ಥಿಗಳಿಗೆ ಸಪ್ಪೆ ಊಟ
- ಇಂದಿನ ರಾಶಿಫಲ —ನಿತ್ಯದ ಪಂಚಾಂಗ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
- ಮಗನಿಗೆ ಬಾತ್ರೂಮ್ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ
- ಕಾಂಡ್ಲಾ ವನಗಳು ಸಾಗರ ತೀರಗಳ ರಕ್ಷಾ ಕವಚ: ಎ.ಸಿ.ಎಫ್ ಕೃಷ್ಣೇ ಗೌಡ
ಸದ್ಯ ಹೆದ್ದಾರಿಯ ಒಂದು ಬದಿಯಲ್ಲಿದ್ದ ಮಣ್ಣು, ಕಲ್ಲು ತೆರವುಗೊಳಿಸಲಾಗಿದೆ. ಗುಡ್ಡಕುಸಿದ ಸ್ಥಳದಲ್ಲಿ ತಡೆಗೋಡೆಗಳ ಅಳವಡಿಕೆ ಸಹ ಪೂರ್ಣವಾಗಿದ್ದು, ಈಗಾಗಲೇ ಸಂಚಾರಕ್ಕೆ ಸಿದ್ದವಾಗಿದೆ.ಎಲ್ಲಾ ತುರ್ತು ಕ್ರಮಗಳನ್ನ ಕೈಗೊಂಡು ಜಿಲ್ಲಾಡಳಿತಕ್ಕೆ ಹೆದ್ದಾರಿ ಪ್ರಾಧಿಕಾರ ವರದಿ ಸಲ್ಲಿಕೆ ಮಾಡಿದೆ. ಹೀಗಾಗಿ ಷರತ್ತುಗಳ ಮೇಲೆ ನಿಯಂತ್ರಿತವಾಗಿ ವಾಹನಗಳನ್ನ ಬಿಡಲು ಜಿಲ್ಲಾಡಳಿತದ ಚಿಂತನೆ ನಡೆಸಿದ್ದು, ಒಂದೆರಡು ದಿನದಲ್ಲಿ ಹೆದ್ದಾರಿ ಸಂಚಾರ ಪುನರಾರಂಭ ಸಾಧ್ಯತೆ ಇದೆ.
.







