suddibindu.in
ಕುಮಟಾ: ಉತ್ತರಕನ್ನಡದಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಬೆನ್ನಲ್ಲೇ ಇದೀಗ ಕುಮಟಾ ತಾಲೂಕಿನಲ್ಲಿ ಭಾರೀ ಗುಡ್ಡಕುಸಿತವಾಗಿದೆ.ಕುಮಟಾ ತಾಲೂಕಿನ ಉಳ್ಳುರುಮಠ ಸಮೀಪ ಭಾರೀ ಗುಡ್ಡಕುಸಿತ ಉಂಟಾಗಿದೆ. ಇದರಿಂದಾಗಿ ಕುಮಟಾ-ಸಿದ್ದಾಪುರ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.ಸುಮಾರು ಎರಡು ಎಕರೆ ಪ್ರದೇಶದಲ್ಲಿ ಗುಡ್ಡಕುಸಿತ ಉಂಟಾಗಿದ್ದು, ಭಾರೀ ಗಾತ್ರದ ಮರಗಳು ನೆಲಕ್ಕುರುಳಿದೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸುತ್ತಿದ್ದಾರೆ.
ಕುಮಟಾ ತಾಲೂಕಿನಲ್ಲಿ ಭಾರೀ ಗುಡ್ಡಕುಸಿತ
