suddibindu.in
ಕುಮಟಾ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಂವ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಹೆದ್ದಾರಿ ಪಕ್ಕದ ನದಿಯಲ್ಲಿ ಪಲ್ಟಿಯಾಗಿದೆ.
ಕುಮಟಾ ಕಡೆಯಿಂದ ಮಂಗಳೂರಿನ ಕಡೆ ಗ್ಯಾಸ್ ಟ್ಯಾಂಕರ್ ಚಲಿಸುತ್ತಿದ್ದು, ಈ ವೇಳೆ ಹೊನ್ಮಂವ್ ಕ್ರಾಸ್ ಬಳಿ ಹೋಗುತ್ತಿದ್ದ ವೇಳೆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ನದಿಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾಗಿರುವುದರಿಂದ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ತಕ್ಷಣ ಆತನಿಗೆ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
ಅದೃಷ್ಟವಶಾತ್ ಖಾಲಿ ಟ್ಯಾಂಕರ್ ಆಗಿರುವುದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ.ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.







