ಸುದ್ದಿ,ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: 9916127361
suddibindu.in
ಹಾವೇರಿ : ಕೆಎಸ್ಆರ್ಟಿಸಿ ಕಂಡಕ್ಟರ್ & ಡ್ರೈವರ್ ಹಾಗೂ ವಿದ್ಯಾರ್ಥಿ ನಡುವೆ ಗಲಾಟೆ ಉಂಟಾಗಿ ವಿದ್ಯಾರ್ಥಿ ಕಾಪಳಕ್ಕೆ ಕಂಡಕ್ಟರ್ ಹೊಡೆದಿದ್ದಾರೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪರಿಸಿರುವ ಘಟನೆ ನಗರದ ಬಸ್ ನಿಲ್ದಾದಲ್ಲಿ ನಡೆದಿದೆ.
ಮನೋಜ್ ಚಳ್ಳಾಳ ಹಲ್ಲೆಗೊಳಗಾದ ವಿದ್ಯಾರ್ಥಿ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ. ಬಸ್ ನಲ್ಲಿ ವಿಧ್ಯಾರ್ಥಿ ಅನುಚಿತವಾಗಿ ವರ್ತಿಸಿದ್ದಾನೆಂದು ಕಂಡಕ್ಟರ್ ವಿದ್ಯಾರ್ಥಿ ಮೇಲೆ ಆರೋಪ ಮಾಡಿದ್ದಾನೆ. ಇದಕ್ಕೆ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಕಂಡಕ್ಟರ್ ಆರೋಪ ಸುಳ್ಳಾಗಿದೆ. ಮನೋಜ್ ಆ ರೀತಿಯಾಗಿ ನಡೆದುಕೊಂಡಿಲ್ಲ. ಎಂದು ಉಳಿದ ವಿದ್ಯಾರ್ಥಿಗಳು ಕಂಡಕ್ಟರ್ ಆರೋಪನ್ನ ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ
- ಕಾಂಗ್ರೇಸ್ನ ಹಿರಿಯ ಶಾಸಕ ಶಾಮನೂರು ವಿಧಿವಶ
- ಶಿರಸಿ ಪಂಡಿತ್ ಆಸ್ಪತ್ರೆಗಾಗಿ ಸುವರ್ಣ ಸೌಧದ ಎದುರು ಹೋರಾಟ : ಅನಂತಮೂರ್ತಿ ಹೆಗಡೆ
- ಇಂದಿನ ರಾಶಿಫಲ- ನಿತ್ಯದ ಪಂಚಾಂಗ
ಬಳಿಕ ವಿದ್ಯಾರ್ಥಿಗಳು ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗುತ್ತಿದ್ದ ಸ್ಥಳಕ್ಕೆ ಹಾವೇರಿ ಶಹರ ಪೊಲೀರ ಭೇಟಿ ನೀಡಿ ಪ್ರತಿಭಟನಾ ವಿದ್ಯಾರ್ಥಿಗಳನ್ನ ಸಮಾಧಾನ ಪಡಿಸಿದ್ದಾರೆ.





