www.suddibindu.in
Karwar: ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಎಲ್ಲ ನದಿಗಳು ತುಂಬಿ ಹರಿಯಲಾರಂಭಿಸಿವೆ. ಕಾಳಿ ನದಿಗೆ ನಿರಂತರವಾಗಿ ನೀರು ಹರಿದುಬರುತ್ತಿರುವ ಕಾರಣ, ಕದ್ರಾ ಜಲಾಶಯದಿಂದ‌ ನೀರು ಹೊರ ಬಿಡಲಾಗಿದೆ
.

ಕದ್ತಾಕದ್ತಾ ಜಲಾಶಯದ ನಾಲ್ಕು ಗೇಟ್ ಮೂಲಕ 6000 ಕೂಸೆಕ್ಸ್ ಹಾಗೂ ವಿದ್ಯುತ್ ಉತ್ಪಾದನೆ ಯಿಂದ 22000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಹೊರ ಬಿಟ್ಟಿರುವುದರಿಂದ ನದಿ ತೀರದ ಜನತೆಯಲ್ಲಿ ಆತಂಕ ಎದುರಾಗಿದೆ. ಡ್ಯಾಂ ನಿಂದ ನೀರು ಹೊರ ಬಿಟ್ಟಿರುವುದರಿಂದ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.