suddibindu.in
ಹೊನ್ನಾವರ : ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹೊಸಪಟ್ಟಣ ಕ್ರಾಸ್ ಬಳಿ ನಡೆದಿದೆ.
ಪಾರ್ಶ್ವವಾಯು ಪೀಡಿತೆ ಕಮಲಾ ಪಟಗಾರ, ಸಂಬಂಧಿಕರು ಮತ್ತು ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಪಾರ್ಶ್ವವಾಯು ಪೀಡಿತ ರೋಗಿ ಓರ್ವನನ್ನ ಕುಮಟಾದಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಹೊನ್ನಾವರ ತಾಲೂಕಿನ ಹೊಸ ಪಟ್ಟಣ ಕ್ರಾಸ್ ಬಳಿ ಹೆದ್ದಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿಯಾಗಿದೆ.
ಇದನ್ನೂ ಓದಿ
- ಆಸ್ಪತ್ರೆಗೆ ಉಪಕರಣ ಕೊಡಿ, ನಂತರ ಉದ್ಘಾಟನೆಗೆ ಬನ್ನಿ: ಕಾಂಗ್ರೇಸ್ ಸರಕಾರಕ್ಕೆ ರೂಪಾಲಿ ನಾಯ್ಕ ಖಡಕ್ ಎಚ್ಚರಿಕೆ”
- ಭಾರತ ಸುತ್ತಲು ನೇಪಾಳದಿಂದ ಬಂದ ಸೈಕಲ್ ಯಾತ್ರಿ : ಕಾರವಾರದಲ್ಲಿ ಬಿಡಾರ
- ಇಂದಿನ ರಾಶಿಫಲ: ನಿಮ್ಮ ಅದೃಷ್ಟ ಏನು ಹೇಳುತ್ತಿದೆ?
ಗಾಯಾಳುಗಳನ್ನ ಇನ್ನೊಂದು ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





