suddibindu.in
ಕಾರವಾರ : ಯುವತಿ ಓರ್ವಳನ್ನ ವಿವಾಹವಾಗುವುದಾಗಿ ಹೇಳಿದ ಪೊಲೀಸ್ ಕಾಸ್ಸ್ಟೇಬಲ್ ಓರ್ವ ಆಕೆಯಿಂದಲ್ಲೆ 20ಲಕ್ಷ ಹಣ ಕಿತ್ತುಕೊಂಡು ವಿವಾಹವು ಆಗದೆ ತೆಗೆದುಕೊಂಡ ಹಣ ವಾಪಸ್ ನೀಡದೆ ಪಂಗನಾಮ ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ಮುಂಡಗೋಡು ಠಾಣೆಯ ಕಾನ್ಸ್ಟೇಬಲ್ ಗಿರೀಶ್ .ಎಸ್.ಎಮ್ ಎಂಬಾತ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ಮೂಲದ ಸುಚಿತ್ರ ಎಂಬಾಕೆಯೇ ವಂಚನೆಗೊಳಗಾಗಿ ದೂರು ನೀಡಿದವರಾಗಿದ್ದಾರೆ. ಈ ಹಿಂದೆ ಸುಚಿತ್ರಾ ರವರು ಮದುವೆಯಾಗುವುದಾಗಿ ನಂಬಿಸಿದ್ದ, ವಂಚಿಸಿರುವ ಬಗ್ಗೆ ಯುವತಿ ಎಸ್.ಪಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದರು.ದೂರು ಹಿನ್ನಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದು ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ. ಆದರೇ ಮದುವೆಯಾಗಲು ನಿರಾಕರಿಸಿದ್ದ.
ಇದನ್ನೂ ಓದಿ
- ಉತ್ತರ ಕನ್ನಡ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣ ! ಶಿವರಾಮ ಹೆಬ್ಬಾರ್ – ಮಂಕಾಳ ವೈದ್ಯರ ನಡುವೆ ತೀವ್ರ ಪೈಪೋಟಿ
- ಉತ್ತರ ಕನ್ನಡದಲ್ಲಿ ನಿರಂತರ ಮಳೆ : ಶಾಲೆಗಳಿಗೆ ಇಂದು ರಜೆ
- ಆರ್ಎಸ್ಎಸ್ ನಿಷೇಧ ಹೇಳಿಕೆ ಪ್ರಚಾರದ ತೆವಲು: ಪ್ರಿಯಾಂಕ ಖರ್ಗೆಗೆ ಹೇಳಿಕೆಗೆ ರೂಪಾಲಿ ನಾಯ್ಕ ತಿರುಗೇಟು
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅವರ ಎದುರು ಒಪ್ಪಿಕೊಂಡಂತೆ ಆ ಯುವತಿಯೆ ಹಣ ವಾಪಸ್ ಮಾಡಿರಲಿಲ್ಲ ಹಣ ಮರಳಿಸದೇ ಇರುವುದರಿಂದ ಯುವತಿ ಕಾಸ್ಸ್ಟೇಬಲ್ ವಿರುದ್ದ ಮುಂಡಗೋಡು ಠಾಣೆಯಲ್ಲಿ ವಂಚನೆ ದೂರು ನೀಡಿದ್ದು ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




