suddibindu.in
hubballi ಹುಬ್ಬಳ್ಳಿ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ Karnataka Raste saree ಜಾಹೀರಾತು ಸಂಖ್ಯೆ : 01/2019 ದಿನಾಂಕ : 10/12/2019 ರನ್ವಯ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆ / ದೈಹಿಕ ಅರ್ಹತೆ ಪರಿಶೀಲನೆಯನ್ನು ದಿನಾಂಕ: 08-04-2024 ರಿಂದ ಪ್ರಾದೇಶಿಕ ತರಬೇತಿ ಕೇಂದ್ರ, ಗೋಕುಲ ರಸ್ತೆ, ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗಿದ್ದು, ಹಾಜರುಪಡಿಸಬೇಕಾದ ಮೂಲ ದಾಖಲೆಗಳ ವಿವರಗಳ ಕುರಿತು ಸಂಸ್ಥೆಯ ವೆಬ್‌ಸೈಟ್ ವಿಳಾಸ “www.nwkrtc.karnataka.gov.in” ನಲ್ಲಿ ತಮ್ಮ ಅರ್ಜಿ ಸಂಖ್ಯೆ / ಜನ್ಮ ದಿನಾಂಕವನ್ನು ನಮೂದಿಸಿ ಕರೆ ಪತ್ರವನ್ನು ಮುದ್ರಿಸಿಕೊಂಡು ನಿಗದಿತ ದಿನಾಂಕ | ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಿಳಿಸಲಾಗಿ.

ಪ್ರಕ್ರಿಯೆಯು ದಿನಾಂಕ: 16-06-2024 ರವರೆಗೆ ಮಾತ್ರ ನಡೆಯಲಿದ್ದು, ಮೂಲ ದಾಖಲೆ/ದೈಹಿಕ ಅರ್ಹತೆ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಅಂತಿಮವಾಗಿ ದಿನಾಂಕಃ 19-06-2024 ರಿಂದ 21-06-2024 ಗಳಂದು ಹಾಜರಾಗುವಂತೆ ತಿಳಿಸಲಾಗಿದೆ.

ಇದು ಅಂತಿಮ ಅವಕಾಶವಾಗಿದ್ದು, ದಿನಾಂಕ: 21-06-2024 ರ ನಂತರ ಮೂಲ ದಾಖಲೆ / ದೈಹಿಕ ಅರ್ಹತೆ ಪರಿಶೀಲನೆಗೆ ಪುನಃ ಅವಕಾಶ ನೀಡಲಾಗುವುದಿಲ್ಲ.