suddibindu.in
Karwar: ಕಾರವಾರ : ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಒಂದಿಷ್ಟು ಘಟನೆಗಳು ಒಬ್ಬರನ್ನ ಎತ್ತರಕ ಬೆಳೆಸುವುದು ಉಂಟು ಹಾಗೂ ಅಷ್ಟೆ ಮಾರಕವಾಗುವುದು ಉಂಟು ಆದರೆ ಸೋಶಿಯಲ್ ಮಿಡಿಯಾದ ಮೂಲಕವೆ ಸುದ್ದಿಯಾಗಿದ್ದ ಉತ್ತರಕನ್ನಡ ಹುಡುಗ ಅದೆ ಸೋಶಿಯಲ್ ಮಿಡಿಯಾದ ಮೂಲಕ ರವಿ. ರವಿ ಅಣ್ಣ ಈಗ ದುನಿಯಾ ವಿಜಯ್ ಅಭಿನಯದ ಜಂಗ್ಲಿ ಸಿನಿಮಾದ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ ಎನ್ನುವ ಹಾಡಿಗೆ ಧ್ವನಿಗೂಡಿಸುವ ಮೂಲಕ ಸಂಚಲನ ಮೂಡಿಸಿದ್ದಾನೆ.
ಉತ್ತರಕನ್ನಡ ಜಿಲ್ಲೆಯ ರವಿ, ರವಿಯಣ್ಣ ಎಂದೆ ಖ್ಯಾಯಾಗಿರುವ ರವಿ ಮಂಗಳೂರಿನ ಅನೀಶ್ ಕಿನ್ನಿಗೋಳಿ ಚಾನೆಲ್ ಅವರ ನೆರವಿನಿಂದ ಅವರ ಸ್ಟೋಡಿಯೋದಲ್ಲಿ ರವಿ.. ದುನಿಯಾ ವಿಜಯ್ ಅಭಿನಯದ ಜಂಗ್ಲಿ ಸಿನಿಮಾದ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ಎಂದು ಇಂಪಾಗಿ ಹಾಡಿ ರೆಕಾರ್ಡ್ ಮಾಡಿದ್ದಾರೆ. ಇಂಪಾದ ಧ್ವನಿಯಲ್ಲಿ ಹಾಡುತ್ತಿರುವ ಹಾಡೊಂದನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ಸಾಂಗ್ ಕೇಳಿದ ನೆಟ್ಟಿಗರು ರವಿ ಅವರ ಶ್ರದ್ದೆ, ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ಹಾಡುವುದು ಎಂದರೆ ರವಿಗೆ ತುಂಬಾ ಇಷ್ಟ ಈತನ ಉಚ್ಚಾರ ದೋಷ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿದ್ದ, ತನ್ನ ಹಾಡಿನ ಬಗ್ಗೆ ಟ್ರೋಲ್ ಆಗಿದ್ದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕಣ್ಣೀರು ಹಾಕಿ ಹಾಡುವುದನ್ನ ನಿಲ್ಲಿಸಿದ್ದ, ಅನೇಕರ ಒತ್ತಾಯ ಮೇಲೆ ರವಿ ಹಾಡಲು ಆರಂಭಿಸಿದ, ಯಾರದೆ ಹುಟ್ಟು ಹಬ್ಬವಾದರೂ ಆತನಿಗೆ ಅವರ ಬಗ್ಗೆ ಮಾಹಿತಿಯನ್ನ ನೀಡಿದರೆ ಆತನ ಶೈಲಿಯಲ್ಲೆ ಹಾಡುವ ಮೂಲಕ ಶುಭಾಶಯ ಕೋರುವ ಹಾಡುಗಳನ್ನ ಹಾಡುವ ಮೂಲಕ ಮತ್ತೆ ರವಿ ಸುದ್ಸಿಯಾಗಿದ್ದ,
ರವಿ ತುಂಬಾ ಬಡತನದ ಕುಟುಂಬದಿಂದ ಬಂದವನಾಗಿದ್ದು, ಹೊಟೇಲ್ಗಳಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ, ರವಿಗೆ ತಾನೊಬ್ಬ ಒಳ್ಖೆಯ ಹಾಡುಗಾರನಾಗಬೇಕು ಎನ್ನುವ ಆಸೆ ಮನಸ್ಸಿನಲ್ಲಿ ಹುಟ್ಟಿಕೊಂಡಿತ್ತು. ಆದರೆ ಸರಿಯಾದ ಉಚ್ಚಾರವಾಗದೆ ಇರುವ ಕಾರಣ ಎಲ್ಲಿಯೂ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ಆದರೆ ಅದೆ ರವಿ ಇದೀಗ ಬದಲಾಗಿದ್ದಾನೆ. ಟ್ರೋಲ್ನಿಂದ ಇಷ್ಟು ದಿನ ಮನನೊಂದ ರವಿ ಇಂದು ಸ್ಟಾರ್ ಆಗಿ ಮಿಂಚಲು ಅನೀಶ್ ಕಿನ್ನಿಗೋಳಿ ಅವರ ಪಯತ್ನದಿಂದ ಇದೀಗ ರವಿ ಒಳ್ಳೆಯ ಸಿಂಗರ್ ಆಗಿ ಗುರುತಿಸಿಕೊಳ್ಳುವ ಕಾಲ ಒದಗಿ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ