suddibindu.in
ಸಿದ್ದಾಪುರ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಐವರಿಗೆ ಗಾಯವಾದ ಘಟನೆ ತಾಲೂಕಿನ ದೊಡ್ಮನೆ ಸಮೀಪದ ಮಾದ್ಲಮನೆ ತಿರುವಿನಲ್ಲಿ ನಡೆದಿದೆ.
ಗಣೇಶ್ ಗಣಪ ಹಸ್ಲರ್ ದೊಡ್ಮನೆ ಈತನು ತನ್ನ ಬೈಕ್ ನಲ್ಲಿ ದೊಡ್ಡಮನೆ ಕಡೆಯಿಂದ ವಂದಾನೆ ಕಡೆಗೆ ಬೈಕ್ ನ್ನು ಅತಿ ವೇಗ ಹಾಗೂ ನಿರ್ಲಕ್ಷ ತರದಿಂದ ಚಲಾಯಿಸಿಕೊಂಡು ಬಂದು ವೇಗದಲ್ಲಿ ನಿಯಂತ್ರಣ ಕಳೆದುಕೊಳ್ಳಲು ಆಗದೆ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ್ದಾನೆ ಪರಿಣಾಮವಾಗಿ ಐವರಿಗೆ ಗಾಯಗಳಾಗಿವೆ.
ಇದನ್ನೂ ಓದಿ
- Sirsi/ ಶಿರಸಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ
- ಧರ್ಮಸ್ಥಳ ಸಾಮೂಹಿಕ ಸಮಾಧಿ ರಹಸ್ಯ: ಅನಾಮಿಕ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
- ಕಲ್ಲೇಶ್ವರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ
ಘಟನೆಯಲ್ಲಿ ಗೋವಿಂದ ದ್ಯಾವ ನಾಯ್ಕ್ ಶಿರೂರು, ಬಾಲಚಂದ್ರ ರಾಮ ಹಸ್ಲರ್ ದೊಡ್ಮನೆ, ಗಣೇಶ್ ಗಣಪ ಹಸ್ಲರ್, ಶಶಾಂಕ್ ಮಂಜುನಾಥ್ ಹಸ್ಲರ್, ಗುಬ್ಬಗೋಡ , ಸುಬ್ರಹ್ಮಣ್ಯ ಗಣಪತಿ ಹಸ್ಲರ್ ಎನ್ನುವವರಿಗೆ ಗಾಯಗಳಾಗಿವೆ.
ಶಶಾಂಕ್ ಎನ್ನುವವರಿಗೆ ತೀವ್ರ ಗಾಯವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.