suddibindu.in
ಬೆಂಗಳೂರು :ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿದ್ದ ಸಂಸದ ರೇವಣ್ಣ ಅವರನ್ನ ಇಂದು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು ವಾದ-ವಿವಾಧ ಆಲಿಸಿದ ನ್ಯಾಯಮೂರ್ತಿ ಕೆ ಎನ್ ಶಿವಕುಮಾರ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಜೂ 6ರ ತನಕ ಎಸ್ಐಟಿ ವಶಕ್ಕೆ ನೀಡುವಂತೆ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ.
ಎಸ್ಐಟಿ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರನ್ನ ಇಂದು ವೈದ್ಯಕೀಯ ಪರೀಕ್ಷೆ ಬಳಿಕ, ಎಸ್ಐಟಿ ಅಧಿಕಾರಿರಿಗಳು ಪ್ರಜ್ವಲ್ ಅವರನ್ನ ಬೆಂಗಳೂರಿನ 42Acmm ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಪ್ರಜ್ವಲ್ ರೇವಣ್ಣ ಪರ ಅರುಣ್ ವಾದ ಮಂಡಿಸಿದ್ದರು. ಎಸ್ಐಟಿ ವಶಕ್ಕೆ ನೀಡುವುದಾರೆ ಒಂದು ದಿನ ಅಷ್ಟೆ ನೀಡಿದರೆ ಸಾಕು ಇದೆ ತುಂಬಾ ಹಳೆಯ ಪ್ರಯಕರಣ ಹಾಗೂ ಅತ್ಯಾಚಾರ ಆಗಿದೆ ಎನ್ನುವ ಬಗ್ಗೆ ಯಾವ ಮಹಿಳೆ ಸಹ ದೂರಿನಲ್ಲಿ ದಾಖಲಿಸಿಲ್ಲ ಎಂದು ಅರುಣ್ ವಾದ ಮಂಡಿಸಿದ್ದರು. ಇನ್ನೂ ಎಸ್ಐಟಿ ಪರವಾಗಿ ಅಶೋಕ ನಾಯ್ಕ ವಾದ ಮಂಡಿಸಿದ್ದರು..
ಇದನ್ನೂ ಓದಿ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
ಎಸ್ಐಟಿ ಪರವಾಗಿ ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡನೆ ಮಾಡಿದ್ದು, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪವಿದೆ. ಲೋಕಸಭಾ ಚುನಾವಣೆಗೆ ಮುನ್ನ ಈತನ ಅಶ್ಲೀಲ ದೃಶ್ಯ ವೈರಲ್ ಆಗಿದೆ. ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಸಂತ್ರಸ್ತೆ ಇದ್ದಾರೆ. ಕೆಲ ತಿಂಗಳ ಹಿಂದೆ ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆ ತಂದಿದ್ದರು. ಈತ ವಿಕೃತಕಾಮಿ, ತನ್ನದೇ ಅಶ್ಲೀಲ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು