suddibindu.in
ಟಿಎಸ್ಎಸ್ ಸಂಸ್ಥೆಗೆ ವಿಶೇಷಾದಿಕಾರಿ ನೇಮಕ ವಿಚಾರ :ಮಂಜುನಾಥ ಸಿಂಗ್ ಎಸ್ ಜಿ ಅಮಾನತು
ಶಿರಸಿ :ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾಗಿರುವ ಶಿರಸಿಯ ಟಿ ಎಸ್ ಎಸ್ ಸಂಸ್ಥೆಗೆ ವಿಶೇಷಾದಿಕಾರಿ ನೇಮಕ ಮಾಡಿರುವ ಪ್ರಕರಣದಲ್ಲಿ ಎಸೆಗಿರುವ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಉಪ ನಿಭಂದಕ ಮಂಜುನಾಥ ಸಿಂಗ್ ಎಸ್ ಜಿ ಇವರನ್ನು ವಿಚಾರಣೆ ಬಾಕಿಯಿರಿಸಿ ಅಮಾನತ್ ಗೊಳಿಸಲಾಗಿದೆ.ಸರಕಾರದ ಈ ಆದೇಶದಿಂದ ಸಂಸ್ಥೆಯ ಆಡಳಿತ ಮಂಡಳಿಗೆ ಇನ್ನೊಂದು ದೊಡ್ಡ ಜಯ ಲಭಿಸಿದಂತಾಗುತ್ರದೆ.ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಗೋಕರ್ಣ :- ಮುಖ್ಯಮಂತ್ರಿ ಆಗಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೋಕರ್ಣದ ಮಹಾಬಲೇಶ್ವರ ದೇವರಲ್ಲಿ ಹರಕೆ ಹೊತ್ತ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಗೋಕರ್ಣಕ್ಕೆ ಕುಟುಂವ ಸಮೇತರಾಗಿ ಆಗಮಿಸಿ ಪ್ರಧಾನಿ ಮೋದಿ ಹಾಗೂ ತಮ್ಮ ಗೆಲುವಿಗಾಗಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ದೂರ್ವೆ ಅರ್ಚನೆ ನೆರೆವೇರಿಸಿದ ಅವರು ನಂತರ ಮಹಾಬಲೇಶ್ವರ ದೇವಸ್ಥಾನದಲ್ಲಿ ಸಂಕಲ್ಪ ಹರಕೆ ಮಾಡಿಕೊಂಡು ಮೋದಿಯವರ ಹಾಗೂ ತಮ್ಮ ಗೆಲುವಿಗಾಗಿ ಪತ್ನಿ ಜ್ಯೋತಿರವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ದಾಂಡೇಲಿಯ ಹಾಲಮಡ್ಡಿಯಲ್ಲಿ ವ್ಯಕ್ತಿ ನಾಪತ್ತೆ : ದೂರು ದಾಖಲು
ದಾಂಡೇಲಿ : ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು, ಈವರೆಗೆ ಮರಳಿ ಮನೆಗೆ ಬಾರದೇ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ತಾಲೂಕಿನ ಆಲೂರು ಗ್ರಾ.ಪಂ ವ್ಯಾಪ್ತಿಯ ಹಾಲಮಡ್ಡಿಯಲ್ಲಿ ನಡೆದಿದೆ. ಹಾಲಮಡ್ಡಿಯ ನಿವಾಸಿ ಮೆಹಬೂಬ ಹುಸೇನಸಾಬ್ ಅಕ್ಷಿಮಣಿ (ವ:34) ಎಂಬತಾನೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ. ಮೇ 25 ರಂದು ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ಈವರೆಗೆ ಮನೆಗೆ ಮರಳಿ ಬಂದಿರುವುದಿಲ್ಲ.ಈ ಬಗ್ಗೆ ಸಲೀಂ ಹುಸೇನಸಾಬ್ ಅಕ್ಷಿಮಣಿ ಅವರು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇಂದು ದೂರು ನೀಡಿದ್ದಾರೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ 08284- 230363, 08284- 231363, 08384-231395, 08382- 226233 ಗೆ ಇಲ್ಲವೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪಿಎಸ್ಐ ಕೃಷ್ಣ ಅರಕೇರಿಯವರು ತಿಳಿಸಿದ್ದಾರೆ.
ಇದನ್ನೂ ಓದಿ
- ದೇಶಪಾಂಡೆ ಹೇಳಿಕೆ ವಿರುದ್ಧ ಎಲ್ಲೆಡೆ ಆಕ್ರೋಶ : ರಾಜೀನಾಮೆಗೆ ತೀವ್ರ ಒತ್ತಾಯ
- ಅಂಕೋಲಾದ ಹೊಟೇಲ್ ಒಂದರ ಮೇಲೆ ಹಠಾತ್ ದಾಳಿ : ಮಾಲೀಕರಿಗೆ ನೋಟಿಸ್ ಜಾರಿ
- Teacher Award ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ : ತಿಮ್ಮಪ್ಪ ನಾಯಕ, ಮಾಲಿನಿ ನಾಯಕ ಸೇರಿ ಹಲವರು ಆಯ್ಕೆ
ಬೈಕ್ ಪಲ್ಟಿ ಸವಾರ ಗಂಭೀರ
ಕುಮಟಾ : ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಆಕಳ ಕರು ತಪ್ಪಿಸಲು ಹೋಗಿ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದೀವಳ್ಳಿಯಲ್ಲಿ ನಡೆದಿದೆ.ಕೆಕ್ಕಾರದ ರತ್ನಾಕರ ರಾಮ ಗೌಡ (27) ಗಂಭೀರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಆಕಳು ಕರು ಒಂದು ಅಡ್ಡ ಬಂದಿದೆ. ಈ ವೇಳೆ ಬೈಕ್ ಸವಾರ ಆಕಳು ಕರುವನ್ನ ತಪ್ಪಿಸಲು ಪ್ರಯತ್ನಿಸಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಲಾರಿ ಹಾಯ್ದು ಓರ್ವ ವ್ಯಕ್ತಿ ಸಾವು
ಅಂಕೋಲಾ: ತಾಲೂಕಿನಲ್ಲಿ ಬಾಳೆಗುಳಿ ರಾಷ್ಟ್ರೀಯ ಹೆದ್ದಾರಿ 66ರ ವರದರಾಜ ಹೊಟೇಲ್ ಬಳಿ, ಲಾರಿಯ ಚಕ್ರ ಹಾಯ್ದು ,ವ್ಯಕ್ತಿ ಓರ್ವ ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಶಿರಕುಳಿ ಗ್ರಾಮದ ಪ್ರಮೋದ ನಾರಾಯಣ ನಾಯ್ಕ (19 ) ಮೃತ ದುರ್ದೈವಿ ಯುವಕನಾಗಿದ್ದಾನೆ. ಈತ ಲಾರಿ ಕ್ಲೀನರ್ ಮತ್ತಿತರ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಇನ್ನೊಂದಯ ಲಾರಿ ಚಕ್ರದಡಿ ಆಕಸ್ಮಿಕವಾಗಿ ಸಿಲುಕಿ ದುರ್ಮರಣ ಮೃತರಾಗಿದ್ದಾರೆ. ಅಂಕೋಲಾದ ವರದರಾಜ ಹೋಟೆಲ್ ಬಳಿ ಉಪಹಾರ ಸೇವಿಸಿ ಚಲಿಸುತ್ತಿದ್ದರು ಎನ್ನಲಾಗಿದೆ.ಸುದ್ದಿ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿ. ಎಸ್ ಐ ಸುನೀಲ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಅಪಘಾತ ಪಡಿಸಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ..
ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಜೋಯಿಡಾ : ಶಾಲೆಗೆ ಹೋಗಲು ಬೇಸತ್ತು ವಿದ್ಯಾರ್ಥಿ ಓರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಹನುಮಾನ ಗಲ್ಲಿಯಲ್ಲಿ ಘಟನೆ ನಡೆದಿದೆ. ಲೋಂಡಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ 5ನೇ ತರಗತಿಗೆ ಹೋಗಬೇಕಿದ್ದ 11ವರ್ಷದ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ತಾಯಿ ಗೋವಾದಲ್ಲಿ ಕೆಲಸಕ್ಕೆ ಹೋಗಿದ್ದು, ತಂದೆ ಮಲಗಿದ್ದ ವೇಳೆ ವಿದ್ಯಾರ್ಥಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿಯುತ್ತಿದ್ದ ಎನ್ನಲಾಗಿದೆ.ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು