suddibindu.in
Karwar:ಕಾರವಾರ : ಕಾರು, ಸ್ಕೋಟಿ, ಹಾಗೂ ಕಾರಿನ ನಡುವೆ ಅಪಘಾತ ಉಂಟಾಗಿ ಸ್ಕೋಟಿ ಸವಾರರನಿಗೆ ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡ ಮಾರುತಿ ಸುಜುಕಿ ಶೋ ರೂಮ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಕಾರವಾರದಿಂದ ಮಾಜಾಳಿ ಕಡೆಗೆ ಹೋಗುವ ಗೋವಾ ನೊಂದಣಿಯ ಕಾರು GAO2. ನ.1366 ರಾಷ್ಟ್ರೀಯ ಹೆದ್ದಾರಿಯಿಂದ ಒಳ ರಸ್ತೆಗೆ ಹೋಗುವಾಗ ಎದುರು ಗಡೆಯಿಂದ ಬರುವ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಗೋವಾ ಕಡೆಯಿಂದ ಅಂಕೋಲಾ ಕಡೆಗೆ ಹೋಗುವ ಬೆಳಿ ಬಣ್ಣದ KA 30 N.0915 ಕಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ
- ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?
- ಹೊನ್ನಾವರದ ಖಾಸಗಿ ಬಸ್ ಚಾಲಕನ ರಾಸಲೀಲೆ : ಇನ್ಸ್ಟಾದಲ್ಲಿ ಪೊಟೋ ಅಪ್ಲೋಡ್..!
- ಮಹಿಳೆಯ ಕಣ್ಣೀರಿಗೆ ನ್ಯಾಯ : ವಿಕೃತ ಕಾಮಿ ಉಲ್ಲಾಸಗೆ 10ವರ್ಷ ಜೈಲು ಶಿಕ್ಷೆ
ಈ ಅಪಘಾತದಲ್ಲಿ ಕಾರು ಹಾಗೂ ಸ್ಕೂಟಿ ಜಕ್ಕಂಗೊಂಡಿದ್ದು ಸ್ಕೋಟಿ ಸವಾರನಿಗೆ ಗಂಭೀರ ಗಾಯವಾಗಿದೆ. ಗಾಯವಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲೆಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





