suddibindu.in
ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಕ್ಕೆ ಹೊಂದಿಕೊಂಡಿರುವ ಗಣಪತಿ ದೇವಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿದ್ದು, ದೇವರ ಬೆಳ್ಳಿ ಮುಖವಾಡವನ್ನೆ ಕಳ್ಳತನ ಮಾಡಲಾಗಿದೆ.
ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ಗಣಪತಿ ದೇವರಿಗೆ ಹಾಕಲಾಗಿದ್ದ ಬೆಳ್ಳಿಯ ಮುಖವಾಡವನ್ನೆ ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ಗಣಪತಿ ದೇವರ ಮುಖವಾಡ ಸುಮಾರು 6ಕೆಜಿ ಬೆಳ್ಳಿಯ ಮುಖವಾಡವಾಗಿದೆ ಎನ್ನಲಾಗಿದೆ.ಅಂದಾಜು 6ರಿಂದ 7ಲಕ್ಷ ಬೆಲೆಬಾಳುವ ಬೆಳ್ಳಿಯ ಮುಖವಾಡ ಎನ್ನಲಾಗಿದೆ.
ಇದನ್ನೂ ಓದಿ
- ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ : ಚೆನೈನಲ್ಲಿ ಚಿರಾಗ್ಗೆ ಬಂಧಿಸಿದ ಪೊಲೀಸರು
- ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ: ಹುಟ್ಟುಹಬ್ಬ–ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯ ರಜೆ
- ಕುಮಟಾ ಸಮೀಪ KSRTC ಬಸ್–ಪಿಕ್ಅಪ್ ವಾಹನ ಡಿಕ್ಕಿ: ಚಾಲಕ ಗಂಭೀರ
ಈಗಾಗಲೇ ಸುದ್ದಿ ತಿಳಿದ ಅಂಕೋಲಾ ಪೊಲಿಸರು ಹಾಗೂ ಕಾರವಾರದಿಂದ ಬೆರಳಚ್ಚು ತಜ್ಞನರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





