suddibindu. in
ಕಾರವಾರ: ಎವರೆಸ್ಟ್ ಫಿಶ್ ಕರಿ ಮಸಾಲೆಯ ಆಮದನ್ನು ಸಿಂಗಾಪೂರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಇದೀಗ ಎವರೆಸ್ಟ್ ಚಿಕನ್ ಮಸಾಲಾವನ್ನು ಬಳಸದಂತೆ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಸೂಚನೆ ನೀಡಿದ್ದಾರೆ..
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
- ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ
- ದೀಪಾವಳಿ ಹಬ್ಬಕ್ಕೆ ಅಂದರ್ ಬಾಹರ್ ಆಟಕ್ಕೆ ಅನುಮತಿ ಕೊಡಿ..!
ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ವರದಿಯಲ್ಲಿ ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೆಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೆಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದೆ. ಇಷ್ಟೊಂದು ಪ್ರಮಾಣದಲ್ಲಿ ಎಥಿಲಿನ್ ಆಕ್ಸೆಡ್ ಬಳಕೆ ಹಾನಿಕಾರಕ. ಇದು ಆರೋಗ್ಯದ ಮೇಲೆ ಪರಿಣಾಮ ಆಗಿಯೇ ಆಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಹೇಳಿದ್ದಾರೆ.
ಈ ಸಂಬಂಧ ಈಗಾಗಲೇ ಎವರೆಸ್ಟ್ ಮಸಾಲಾ ಕಂಪನಿಗೆ ನೋಟಿಸ್ ನೀಡಿ ಚಿಕನ್ ಮಸಾಲಾ ಪಾಕೆಟ್ ಸರಬರಾಜು ನಿಲ್ಲಿಸಬೇಕೆಂದು ಹೇಳಲಾಗಿದೆ. ಅದಲ್ಲದೆ ಅಂಗಡಿಗಳಿಗೆ ಪೊರೈಸಿದ ಮಸಾಲೆಯನ್ನು ವಾಪಸ್ಸು ಪಡೆಯುವಂತೆ ಉಲ್ಲೇಖಿಸಲಾಗಿದೆ.