suddibindu.in
ಕಾರವಾರ: ಬಿಸಿಲಿನಲ್ಲಿ ತಾಪಮಾನಕ್ಕೆ ಬೇಸತ್ತಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಮಲೆನಾಡು,ಬಯಲು ಸೀಮೆಯ ತಾಲೂಕಿನಲ್ಲಿ ವರುಣನ ಅಬ್ಬರಿಸಿದ್ದಾನೆ, ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗಿದೆ.
- ಉತ್ತರ ಕನ್ನಡದಲ್ಲಿ ಯೋಜನೆಗಳಿಗೆ ವಿರೋಧ ಮಾಡುವ ಡೊಂಗಿ ಹೋರಾಟಗಾರರು ಆಸ್ಪತ್ರೆಗಾಗಿ ಯಾಕೆ ಹೋರಾಡುತ್ತಿಲ್ಲ.?
- Fish market/ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ : ಸಚಿವ ಮಂಕಾಳ್ ವೈದ್ಯ
- ಸ್ಮರಣೀಯ ಸೇವೆಯೊಂದಿಗೆ ವಿಶ್ರಾಂತ ಜೀವನಕ್ಕೆ ಅಡಿಯಿಡುತ್ತಿರುವ ಶಿಸ್ತಿನ ಶಿಕ್ಷಕ ಉಮೇಶ ನಾಯ್ಕ
ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಅಬ್ಬರದಿಂದ ಖುಷಿಯಾಗಿದೆ. ಅದರೇ ಗಾಳಿ ಸಹಿತ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಏಕಾಏಕಿ ವರುಣನ ಅಬ್ಬರ ಜೋರಾಗಿದ್ದು, ಬಿಸಿಲಿನ ತಾಪದ ಬೆನ್ನಲ್ಲೇ ಮಳೆರಾಯನ ಅಬ್ಬರ ಜಿಲ್ಲೆಯ ಜನರನ್ನು ತಬ್ಬಿಬ್ಬು ಮಾಡಿದೆ.
ಉತ್ತರ ಕನ್ನಡ ಜಿಲ್ಲಾದ್ಯಂತ ಬಹುತೇಕ ಗುಡುಗು ಸಹಿತ ಮಳೆಯಾಗಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ ಮಳೆಗೆ ಅನೇಕ ಕಡೆಯಲ್ಲಿ ಮರಗಳು ನೆಲಕ್ಕುರುಳಿದೆ. ಗಾಳಿ ಮಳೆಗೆ ಹಲವೆಡೆಯಲ್ಲಿ ವಿದ್ಯುತ್ ಕಂಬಗಳಿ ಸಹ ನೆಲ್ಕುರುಳಿದ್ದು, ವಿದ್ಯುತ್ ಕೈಕೊಟ್ಟಿದೆ. ಇನ್ನೂ ಕೆಲವು ಕಡೆಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಉಂಟಾಗಿದೆ.