suddibindu.in
ಬೀದರ್ :ಓಡಿಶಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ಮಹಾರಾಷ್ಟ್ರ ರಾಜ್ಯದ ಮಾರ್ಗವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬೆಂಗಳೂರಿನ ಎನ್ ಸಿಬಿ ಬೀದರ್ ಪೊಲೀಸರ ಭರ್ಜರಿ ಕಾರ್ಯಚರಣೆ ಮೂಲಕ 15ಕೋಟಿ ಮೌಲ್ಯದ (fifteen crores) ಗಾಂಜಾ ಜಪ್ತಿ ಮಾಡಿರುವ ಘಟನೆ ಔರಾದ್ ನ ವನಮಾರಪಳ್ಳಿ ನಡೆದಿದೆ..
ಇದನ್ನೂ ಓದಿ
- ಕುಮಟಾ-ಬಳ್ಳಾರಿ ಬಸ್ ಪಲ್ಟಿ :49 ಪ್ರಯಾಣಿಕರಿಗೆ ಗಾಯ : ಗಾಯಾಳುಗಳು ಆಸ್ಪತ್ರೆಗೆ ದಾಖಲು
- ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ
- ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ ಸಿಬಿ ತಂಡ 15 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.ಬೆಂಗಳೂರು ಎನ್.ಸಿ.ಬಿ ತಂಡ ಹಾಗೂ ಬೀದರ್ ಜಿಲ್ಲಾ ಔರಾದ್ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿದ್ದಾರೆ..ಅಕ್ರಮ ಗಾಂಜಾ ಸಾಗಾಟ ಕುರಿತು ಖಚಿತ ಮಾಹಿತಿ ಮೇರೆಗೆ ಎನ್ ಸಿ ಬಿ ತಂಡ ಹಿಂಬಾಲಿಸಿ ಔರಾದ್ ನ ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ಮತ್ತು ತಂಡ ದಾಳಿ ನಡೆಸಿದ್ದಾರೆ….
ಖದೀಮರು ಲಾರಿಯಲ್ಲಿ ಸಿಮೆಂಟ್ ಇಟ್ಟಿಗೆ ತುಂಬಿದ್ದು ಒಳಗಡೆ ಗಾಂಜಾ ಪ್ಯಾಕೇಟ್ಗಳನ್ನು ಅಡಗಿಸಿಟ್ಟಿ ಸಾಗಾಟ ಮಾಡುತ್ತಿದ್ದರು.ಅಕ್ರಮ ಸಾಗಣೆ ಪ್ರಕರಣದಲ್ಲಿ ಬೀದರನ ಹುಮನಾಬಾದ ತಾಲ್ಲೂಕಿನ ಹಂದಿಕೇರಾ ಗ್ರಾಮದ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ.1500 ಕೆ.ಜಿ ಗಾಂಜಾ (1500 kg ganja) ಇದ್ದು ಅಂದಾಜು 15 ಕೋಟಿ ರೂಪಾಯಿ ಮೌಲ್ಯದ ಪತ್ತೆಯಾಗಿದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.