ದಾಂಡೇಲಿ: ಬೆಳಗಾವಿಯ ಮಿರಜ್ ನಿಂದ ಕಾರವಾರಕ್ಕೆ ಬರಬೇಕಾದ ಕೆಎಸ್‌ಆರ್‌ಟಿಸಿ ಬಸ್ ನಡು ರಸ್ತೆಯಲ್ಲಿ ಕೆಟ್ಟುನಿಂತು ನಾಲ್ಕು ಗಂಟೆಯಿಂದ ಪ್ರಯಾಣಿಕರು ಪರದಾಡುತ್ತಿರುವ ಘಟನೆ ದಾಂಡೇಲಿಯ ಗಣೇಶ ಗುಡಿಯಲ್ಲಿ ನಡೆದಿದೆ.
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ಇದನ್ನೂ ಓದಿ
ಬೆಳಗಾವಿಯ ಮಿರಜ್ ನಿಂದ ಕಾರವಾರಕ್ಕೆ ಬರುತ್ತಿದ್ದ ಬಸ್ ದಾಂಡೇಲಿಯ ಗಣೇಶ ಗುಡಿ ಬಳಿ ಕೆಟ್ಟು ನಿಂತಿದೆ. ಈ ಬಸ್ ಈ ಬಸ್ ಸಂಜೆ 6ಗಂಟೆಗೆ ಕಾರವಾರಕ್ಕೆ ಬಂದು ತಲುಪಬೇಕಿತ್ತು.ಆದರೆ ರಾತ್ರಿ 10ಗಂಟೆಯಾದರು ಸಹ ಬಸ್ ಕಾರವಾರಕ್ಕೆ ಬಂದು ತಲುಪಿಲ್ಲ ಎನ್ನಲಾಗಿದೆ. ಹೀಗಾಗಿ ಕಾರವಾರಕ್ಕೆ ಬರಬೇಕಾದ ಅನೇಕ ಪ್ರಯಾಣಿಕರಿದ್ದು, ಬಸ್ ಕೆಟ್ಟುನಿಂತ ಕಾರಣ ಕೆಎಸ್‌ಆರ್‌ಟಿಸಿ ಸಂಸ್ಥೆ ಪರ್ಯಾಯ ವ್ಯವಸ್ಥೆ ಮಾಡದೆ ಹಾಗೂ ಕೆಟ್ಟು ನಿಂತ ಬಸ್ ದುರಸ್ಥೆ ಮಾಡದೆ ಇರುವ ಕಾರಣ ಕಾರವಾರಕ್ಕೆ ಬಂದು ತಲುಪಬೇಕಾಗಿದ್ದ ಪ್ರಯಾಣಿಕರು ನಡು ರಸ್ತೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ.
ಬಸ್ ಕೆಟ್ಟು ಹೋಗಿರುಗ ಬಗ್ಗೆ ಬಸ್ ನಲ್ಲಿದ್ದ ಪ್ರಯಾಣಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದಾರೆ ಎನ್ನಲಾಗಿದ್ದು, ಈ ಬರತ್ತೆ,ಆಗ ಬರತ್ತೆ ಅಂತಾ ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆಂದು ಪ್ರಯಾಣಿಕರೊಬ್ಬರು ದೂರಿದ್ದಾರೆ…