suddibindu.in
SIRSI: ಊಟ ಮಾಡಿ ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದು ಐವರು ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ರಾಷ್ಟ್ರೀಯ ಹೆದ್ದಾರಿ 766EEಯ ಹೀಪ್ನಳ್ಳಿ ಕ್ರಾಸ್ ಬಳಿ ನಡೆದಿದೆ.

ಮಗು ಸೇರಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಮಿಕರು ರಸ್ತೆ ಕೆಲಸ ಮುಗಿಸಿಕೊಂಡು ಊಟ ಮಾಡಿ ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರೆಲ್ಲಾ ಹೈದರಬಾದನ್ ಮೆಹಬೂಬ ನಗರದ ಕಾರ್ಮಿಕರೆಂದು ಗೊತ್ತಾಗಿದೆ.
ಇದನ್ನೂ ಓದಿ
- ಇಂದಿನ ರಾಶಿಫಲ- ನಿತ್ಯದ ಪಂಚಾಂಗ
- ಕರಾವಳಿ ಉತ್ಸವ : ಐತಿಹಾಸಿಕ ಸ್ಥಳ, ಅಲ್ಲಿಗೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳ ಛಾಯಾಚಿತ್ರ ಪ್ರದರ್ಶನ
- ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
ಕುಮಟಾ-ಶಿರಸಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು. ಈ ರಸ್ತೆ ಕಾಮಗಾರಿಯನ್ನ ಆರ್.ಎನ್ ಶೆಟ್ಟಿ ಕಂಪನಿ ನಿರ್ವಹಿಸುತ್ತಿದೆ.ಗಂಭೀರ ಗಾಯಗೊಂಡಿದ್ದ ಕಾರ್ಮಿಕರನ್ನ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ರವಾನೆ ಅಪಘಾತದಲ್ಲಿ ಗಾಯ ಗೊಂಡವರನ್ನ ಟಿಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ





