Subbibindu.in
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇನ್ನೂ 8ದಿನಗಳ ಕಾಲ ಇನ್ನಷ್ಟು ಗರಿಷ್ಠ ತಾಪಮಾನ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸಹ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು,ಇನ್ನೂ ಕೂಡ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಇಂದಿನಿಂದ 14ದಿನಗಳ ಕಾಲ ಬಿಸಿಗಾಳಿ ಬಿಸುವ ಸಾಧ್ಯತೆ ಇದೆ,ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಚಿತ್ರದುರ್ಗ ಗದಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ಬಿಸಿಗಾಳಿ ಬಿಸಲಿದೆ.
ಇದನ್ನೂ ಓದಿ
- ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗನ ಜೀವ ಉಳಿಸಿದ ಜೀವ ರಕ್ಷಕರು
- ತಿಂಡಿ ಪ್ಯಾಕೆಟ್ನೊಳಗಿನ ಆಟಿಕೆ ಸ್ಫೋಟ : ಶಾಶ್ವತವಾಗಿ ಕಣ್ಣು ಕಳೆದುಕೊಂಡ ಎಂಟು ವರ್ಷದ ಬಾಲಕ
- ಗೋಕರ್ಣ ಪಿ.ಎಸ್.ಐ. ಖಾದರ ಬಾಷಾ ಕುಮಟಾ ಠಾಣೆಗೆ ವರ್ಗಾವಣೆ
ಅತ್ಯಧಿಕ ತಾಪಮಾನದಿಂದಾಗಿ ವೃದ್ಧರು, ಮಕ್ಕಳು ಹಾಗೂ ಆನಾರೋಗ್ಯಪೀಡಿತರ ಮೇಲೆ ಪರಿಣಾಮ ಬೀರಲಿದೆ.ಈ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಪೂರ್ವಭಾವಿ ಕ್ರಮ ಕೈಗೊಳ್ಳುವುದು ಅಗತ್ಯ. ಬಿಸಿಗಾಳಿ ಪರಿಣಾಮಗಳನ್ನು ನಿವಾರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ.ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಮತ್ತು ಬಿಸಿಗಾಳಿಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಇಂತಹ ಪ್ರಯತ್ನ ಅತ್ಯಗತ್ಯ ಎಂದು ಇಲಾಖೆ ಸಲಹೆ ನೀಡಿದೆ.





