suddibindu.in
ಭಟ್ಕಳ: ಈ ಹಿಂದಿನ ಸಂಸದರು ಸಂಸತ್ತಿನಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತ್ನಾಡದೆ ಇರುವುದೇ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿಯುವಂತಾಗಿದೆ.ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿನ ಸಮಸ್ಯೆಗಳ ಸರ್ಜರಿ ಮಾಡಲು ಜಿಲ್ಲೆಗೆ ಡಾ.ಅಂಜಲಿ ನಿಂಬಾಳ್ಕರ್ ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಅರ್ಬನ್ ಬ್ಯಾಂಕಿನ ಎ.ಕೆ.ಹಾಪಿಝ್ಕಾ ಹಾಲ್ ನಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾದ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ
- ಚಿತ್ತಾಕೂಲಕ್ಕೆ ನೂತನ ಪಿಎಸ್ಐ ಆಗಿ ಪರಶುರಾಮ್ ಮಿರ್ಜಿಗಿ, ಮುಂಡಗೋಡಕ್ಕೆ ಮಾಹಾಂತೇಶ್ ವಾಲ್ಮೀಕಿ ನೇಮಕ
- ದಸರಾ ಉದ್ಘಾಟನೆ ವಿವಾದಕ್ಕೆ ಫುಲ್ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
ಲೋಕಸಭಾ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ ಇತಿಹಾಸ ಸೃಷ್ಠಿಮಾಡಲಿದ್ದಾರೆ. ಗೆಲ್ಲುವ ವಿಶ್ವಾಸ ಇದೆ. ನಮ್ಮ ಸರಕಾರದ ಅಭಿವೃದ್ಧಿ ಕೆಲಸವನ್ನ ಮುಂದಿಟ್ಟು ಮತವನ್ನ ಕೇಳತ್ತೇವೆ.ಬಿಜೆಪಿಯವರು ಸುಳ್ಳು ಹೇಳಿಕೊಂಡೆ ಮತ ಕೇಳತ್ತಾ ಬಂದಿದ್ದಾರೆ.ಈ ಚುನಾವೆಯಲ್ಲಿಯೂ ಸಹ ಅವರು ಅದನ್ನೆ ಮಾಡೋದು.ನನ್ನ ಗೆಲುವಿನಲ್ಲೂ ತಾವೇಲ್ಲಾ ಸಾಕಷ್ಟು ಪ್ರಯತ್ನ ಮಾಡಿದ್ದೀರಿ.ಅದೇ ರೀತಿ ನನ್ನ ಕ್ಷೇತ್ರದಲ್ಲಿ ಅಂಜಲಿ ನಿಂಬಾಳ್ಕರ್ ಅವರಿಗೆ ಹೆಚ್ಚಿನ ಮತಗಳನ್ನ ನೀಡಿ ಗೆಲ್ಲಿಸಬೇಕಿದೆ.ಗ್ಯಾರಂಟಿ ಯೋಜನೆಯಿಂದ ರಾಜ್ಯ ದೀವಾಳಿ ಆಗಲಿದೆ ಅಂತಾ ವಿರೋಧ ಪಕ್ಷದವರು ಹೇಳಿದ್ದರು. ಆದರೆ ಸರಕಾರ ಇನ್ನೂ ಗಟ್ಟಿಯಾಗಿದೆ.ಮುಂದೆಯು ಇರಲಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆಯನ್ನ ಇಡೇರಿಸಿದ್ದೇವೆ.,
ಇದು ಅಂಜಲಿ ನಿಂಬಾಳ್ಕರ್ ಅವರ ಚುನಾವಣೆಯಲ್ಲ ಬಡವರ ಚುನಾವಣೆ. ರಾಜ್ಯದಲ್ಲಿ ನಮ್ಮ ಸರಕಾರ ಬಂದ ಮೇಲೆ ಬಡವರು ನೆಮ್ಮದಿಯಿಂದ ಜೀವ ಮಾಡುವಂತಾಗಿದೆ.ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನ ಮಾಡುತ್ತೇವೆ. ಅದಕ್ಕೆ ತಮ್ಮೆಲ್ಲರ ಬೆಂಬಲ ಬೇಕಾಗಿದೆ. ಈ ಬಾರಿ ಕೇಂದ್ರದಲ್ಲ ನಮ್ಮದೇ ಸರಕಾರ ಬರಲಿದೆ ಜೊತೆಗೆ ಅಂಜಲಿ ನಿಂಬಾಳ್ಕರ್ ಕೇಂದ್ರದ ಮಂತ್ರಿಕೂಡ ಆಗತ್ತಾರೆಂದು ಸಚಿವ ಮಂಕಾಳು ವೈದ್ಯ ಭರವಸೆ ನೀಡಿದ್ದಾರೆ.