suddibindu. in
ಕಾರವಾರ: ಬಿಜೆಪಿಯ ಚುನಾವಣೆ ಕೆರೆ-ದಂಡೆ ಆಟಕ್ಕೆ ತೆರೆಬಿದ್ದಿದೆ. ಅನಂತಕುಮಾರ ಕೆರೆಗೆ, ಕಾಗೇರಿ ದಡಕ್ಕೆ, ಆಗುವುವುದರ ಜೊತಗೆ ಹಂಚಿಕೆ ಆಟ ತೆರೆಕಂಡಿದೆ.ಆದರೆ ಈಗ ಪ್ರಜ್ಞಾವಂತ ಮತದಾರು ಇರುವ ಉತ್ತರಕನ್ನಡದಲ್ಲಿ ಬಿಜೆಪಿಯಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಖುರ್ಚಿ ಮೇಲ್ವರ್ಗಕ್ಕೆ ಮೀಸಲೆ..? ಎಂಬ ಚರ್ಚೆ ಶುರುವಾಗಿದೆ.
ಕಳೆದ ಏಳು ಸಾರಿ, ಮೂವತ್ತು ವರ್ಷ ಆಡಳಿತ ನಡೆಸಿದ (ಬ್ರಾಹ್ಮಣ)ವರ್ಗಕ್ಕೆ ಸೇರಿದ ಅನಂತಕುಮಾರ ಹೆಗಡೆ, ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾಗಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್ನಿಂದ ದೇವರಾಯ ನಾಯ್ಕ ಅವರು ನಾಲ್ಕು ಬಾರಿ ಎಂ ಪಿ ಆಗಿದ್ದರು, ಆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಿದ್ದರು ಎನ್ನುವುದು ಬಿಜೆಪಿ ಮುಖಂಡರಿಗೂ ನೆನಪಿರುವ ಸಾಧ್ಯತೆ ಕಡಿಮೆ. ಯಾಕೆ ಎಂದರೆ ಜಿಲ್ಲೆಯಲ್ಲಿ “ಕಾಂಗ್ರೆಸ್ ಹವಾ” ಆ ಪ್ರಮಾಣದಲ್ಲಿ ಇತ್ತು. ತದನಂತರದಲ್ಲಿ ಮಾರ್ಗರೆಟ್ ಆಳ್ವ ಒಂದು ಬಾರಿ ಅನಂತಕುಮಾರ ಅವರನ್ನ ಮಣಿಸಿ ಎಂಪಿ ಆದರು,ಆದರೆ ಅನಂತಕುಮಾರ ಹೆಗಡೆ ಕಳೆದ ಮೂವತ್ತು ವರ್ಷದಿಂದ ಸಂಸತ್ತಿನ ಸದಸ್ಯರಾಗಿ ಆಡಳಿತ ನಡೆಸುತ್ತಿದ್ದಾರೆ.
ಇದನ್ನೂ ಓದಿ
- ಕೊಟ್ಟಿಗೆಯೊಳಗೆ ನುಗ್ಗಿದ ಚಿರತೆ : ರಕ್ತದ ಮಡಿಲಲ್ಲಿ ಎರಡು ಕರುಗಳ ಸಾವು
- ಗೋವಾಕ್ಕೆ ತೆರಳುತ್ತಿದ್ದ ಪ್ರವಾಸಿಗರ ವಾಹನ ಪಲ್ಟಿ : ಚಾಲಕ ಗಂಭೀರ
- ಕೆಡಿಸಿಸಿ ಬ್ಯಾಂಕ್ ಚುನಾವಣೆ ಶಿವರಾಮ ಹೆಬ್ಬಾರ್ ಎಚ್ಚರಿಕೆ ಹೆಜ್ಜೆ, ಮಂಕಾಳ ವೈದ್ಯರಿಗೆ ಅಧ್ಯಕ್ಷ ಸ್ಥಾನ ಸಾಧ್ಯತೆ
ಈ ಬಾರಿ ರಾಜಕೀಯ ಚದುರಂಗದಾಟದಲ್ಲಿ ಅನಂತಕುಮಾರ ಅವರ ಬಾಯಿಯೇ ಅವರಿಗೆ ಶತ್ರುವಾಗಿದ್ದು, ಇನ್ನೆನು ಅನಂತಕುಮಾರ ಅವರಿಗೆ ಟಿಕೆಟ್ ತಪ್ಪಿಸಿ ಬಿಜೆಪಿಯಲ್ಲಿ ಹತ್ತಾರು ವರ್ಷಗಳ ಕಾಲ ದುಡಿದು ಪಕ್ಷಕಾಗಿ ಬೆವರು ಹರಿಸಿರುವ ಯಾವೂದಾರೂ ಹಿಂದೂಳಿದ ವರ್ಷದ ಸಾಮಾನ್ಯ ಕಾರ್ಯಕರ್ತರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವುದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸುತ್ತಾರೆ ಎಂಬ ಸುದ್ದಿಯು ಹರಡಿತ್ತು.
ಆದರೆ ಇದೀಗ ಬಿಜೆಪಿ ಟಿಕೆಟ್ ಹಂಚಿಕೆ ಪ್ರಹಸನ ಮುಗಿದಿದ್ದು, ಮತ್ತೆ ಮೇಲ್ವರ್ಗದವರೇ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವರಿಗೆ ಟಿಕೆಟ್ ನೀಡಲಾಗಿದೆ. “ಇದು ನೆಂಟ ಹೋದ-ಬಾವ ಬಂದ” ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರದ ಮತದಾರರು ವ್ಯಂಗ್ಯವಾಡುತ್ತಿದ್ದಾರೆ…