Ticket doubt for Uttara Kannada MP?
suddibindu.in
ಬೆಂಗಳೂರು : ಸಂಸತ್ ಚುನಾವಣೆಯ(Parliament Election) ಕಾವು ಏರಲಾರಂಭಿಸಿದ್ದು, ಬಿಜೆಪಿ(bjp) ರಾಜ್ಯದಲ್ಲಿ ಹಲವು ಸಂಸತ್ ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿ ರಾಜ್ಯದ ತನ್ನ ಕಾರ್ಯಕರ್ತರ ಸಹಿತ ಮತದಾರರಲ್ಲೂ ಅಚ್ಚರಿ ಮೂಡಿಸಿದೆ.
ಮೈಸೂರಲ್ಲಿ (Mysore) ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವೇ ಇಲ್ಲ ಎಂದು ಕ್ಷೇತ್ರದ ಕಾರ್ಯಕರ್ತರೇ ವಾದಿಸುತ್ತಿದ್ದರು. ಆದರೆ ಮೈಸೂರಲ್ಲಿ ಅರಮನೆಯ ಯಧುವೀರ ಅವರಿಗೆ ಬಿಜೆಪಿ ಮಣೆ ಹಾಕಿದ್ದು, ಪ್ರತಾಪ್ ಸಿಂಹ ಅವರಿಗೆ ವಿಶ್ರಾಂತಿ ನೀಡಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಗ್ಗೆ ಹೇಳುವುದಾದರೆ ಅಲ್ಲಿ ಹಿಂದೆ ಸಂಸದೆಯಾಗಿ, ಕೇಂದ್ರ ಸಚಿವೆಯೂ ಆಗಿದ್ದ ಶೋಭಾ ಕರಂದ್ಲಾಜೆಗೆ (Shobha Karandlaje) ಟಿಕೆಟ್ ತಪ್ಪಿಸಿದ್ದು, ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ತಳ್ಳಲಾಗಿದೆ. ಶೋಭಾ ವಿರುದ್ಧ ಕರಾವಳಿಯ ಮೀನುಗಾರರು ಬೆಂಕಿ ಕಾರಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು.ಮೀನುಗಾರರನ್ನು ಎದುರು ಹಾಕಿಕೊಂಡು ಮತ್ತೆ ಶೋಭಾರನ್ನೇ ಕಣಕ್ಕಿಳಿಸಿದರೆ ಈಡಗಂಟು ಕಳೆದುಕೊಳ್ಳುವುದು ಪಕ್ಕಾ ಎಂದರಿತ ಬಿಜೆಪಿ ಹೈಕಮಾಂಡ್ ತಾಳ್ಮೆಯ ಹೆಜ್ಜೆಯಿಟ್ಟು, ಶೋಭಾರನ್ನು ಬೆಂಗಳೂರು ಉತ್ತರಕ್ಕೆ (Bangalore North) ತಳ್ಳಿದ್ದಾರೆ.
ಇದನ್ನೂ ಓದಿ:-
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
ಬಿಜೆಪಿ ಹೈಕಮಾಂಡ್ ಪ್ರತಾಪ್ ಸಿಂಹರಿಗೆ ವಿಶ್ರಾಂತಿ ನೀಡಿದಂತೆ ಶೋಭಾಗೂ ವಿಶ್ರಾಂತಿ ನೀಡುತ್ತಿದ್ದರು. ಆದರೆ ಶೋಭಾ ಯಡಿಯೂರಪ್ಪ ಅವರಿಗೆ ಆಪ್ತರಾದ ಕಾರಣ ಮತ್ತೆ ಯಡಿಯೂರಪ್ಪರ ಕಣ್ಣು ಕೆಂಪಗಾಗಿಸುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಇನ್ನು ದಕ್ಷಿಣ ಕನ್ನಡದಲ್ಲೂ ನಿರೀಕ್ಷೆಯಂತೆ ನಳಿನ್ ಕುಮಾರ ಅವರಿಗೆ ವಿಶ್ರಾಂತಿ ನೀಡಿ ಕ್ಯಾಪ್ಟನ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯದ ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡಿದ ನಳಿನ್ ಅವರಿಗೇ ಟಿಕೆಟ್ ತಪ್ಪಿಸಿದ ಬಿಜೆಪಿ ಹೈಕಮಾಂಡ್ ಗಟ್ಟಿತನ ಮೆಚ್ಚಲೇ ಬೇಕು.
ಇನ್ನು ಉತ್ತರ ಕನ್ನಡದ ಅಭ್ಯರ್ಥಿ ಘೋಷಣೆ ಬಾಕಿಯಿದೆಯಾದರೂ ಹಿಂದಿನ ಸಂಸದ ಅನಂತಕುಮಾರ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನುತ್ತವೆ ಬಿಜೆಪಿಯ ವಿಶ್ವಸನೀಯ ಮೂಲಗಳು.ಇದಕ್ಕೆ ಕಾರಣವೂ ಇದೆ. ಅನಂತಕುಮಾರ ಹಿರಿಯ ಸಂಸದರಾಗಿದ್ದರು ಎಂಬ ಕಾರಣಕ್ಕಾಗಿಯೇ ಅವರನ್ನು ಹಿಂದೆ ಮಂತ್ರಿ ಮಾಡಲಾಗಿತ್ತು. ಆದರೆ ಈ ಪುಣ್ಯಾತ್ಮ ತಮಗೆ ಕೊಟ್ಟ ಖಾತೆಯನ್ನೇ ನೀರಿಲ್ಲದ ಬಾವಿ'' ಎಂದು ಹೀಗಳೆದರು. ಇದೊಂತರ
ಕುಣಿಯಲು ಬಾರದವ ಅಂಗಳ ಡೊಂಕು” ಎಂಬತಿತ್ತು. ಈ ಸಮಯದಲ್ಲೇ ಮಹಾತ್ಮಾ ಗಾಂಧಿ, ಸಂವಿಧಾನ ವಿರುದ್ಧವೂ ಮಾತಾಡಿ ತನ್ನ ಅರ್ಹತೆ, ಯೋಗ್ಯತೆ ಏನು ಎನ್ನುವುದನ್ನು ತೋರ್ಪಡಿಸಿದ್ದರು. ನಂತರ ಮಂತ್ರಿ ಸ್ಥಾನ ಕಳೆದುಕೊಂಡು ಬರೀ ಸಂಸದರಾದರು. ಆಗಲೂ ಕ್ಷೇತ್ರ ಪ್ರವಾಸ ಮಾಡಲಿಲ್ಲ. ಕೇವಲ ವನವಾಸ ಎಂಬಂತೆ ತನ್ನ ಗೆಲುವಿಗೆ ಕಾರಣರಾದ ಮತದಾರರಿಂದಲೂ ದೂರ ಉಳಿದರು.
ವಾಸ್ತವ ಹೀಗಿರುವಾಗ ಬಿಜೆಪಿ ಹೈಕಮಾಂಡ್ ಮೈಕಾಸುರ ಕುಖ್ಯಾತಿಯ ಅನಂತಕುಮಾರ್ ಅವರನ್ನು ಮತ್ತೆ ಕರೆದು ಟಿಕೆಟ್ ಕೊಡುತ್ತದೆ ಎನ್ನುವುದು ಅನುಮಾನ ಎಂದು ಬಿಜೆಪಿಯ ಶಕ್ತಿ ಕೇಂದ್ರದವರೇ ಪಿಸುಗುಡುತ್ತಿದ್ದಾರೆ. ಕ್ಷೇತ್ರದಲ್ಲಿ ಕೆಲಸ ಮಾಡಿದ ಪ್ರತಾಪ್ ಸಿಂಹರಿಗೆ ಟಿಕೆಟ್ ತಪ್ಪಿದೆ, ರಾಜ್ಯಾಧ್ಯಕ್ಷನಾಗಿದ್ದ ನಳಿನ್ ಕುಮಾರ ಅವರಿಗೆ ಟಿಕೆಟ್ ತಪ್ಪಿದೆ. ಹೀಗಿರುವಾಗ ಅಭಿವೃದ್ಧಿ ಶೂನ್ಯ, ಸಂಸತಲ್ಲಿ ಕಳೆದ ಐದು ವರ್ಷದಲ್ಲಿ ಒಮ್ಮೆಯೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತಾಡದ ಉತ್ತರ ಕನ್ನಡದ ಸಂಸದ ಅನಂತಕುಮಾರಗೆ ಟಿಕೆಟ್ ಸಿಗುವುದು ಸಾಧ್ಯವೇ?
ಅಕಸ್ಮಾತ್ ಟಿಕೆಟ್ ನೀಡಿದರೆ ಪವಾಡ ಆದಂತೆ! ಟಿಕೆಟ್ ನೀಡದಿದ್ದರೆ ಬಿಜೆಪಿ ಹೈಕಮಾಂಡ್ ನಿಜಕ್ಕೂ ಪರಿವರ್ತನೆಯ ಹಾದಿಯಲ್ಲಿದ್ದಂತೆ ಎನ್ನುತ್ತಾರೆ ಬಿಜೆಪಿಯಲ್ಲಿ ಬದಲಾವಣೆ ಬಯಸುವ ಹಿರಿಯ ಕಾರ್ಯಕರ್ತರು.