Congress candidates will be final tomorrow
suddibindu.in
ಬೆಂಗಳೂರು : ಲೋಕಸಭಾ ಚುನಾವಣೆಗಾಗಿ ನಾಳೆ‌ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣ ಸಮಿತಿ ಸಭೆ ನಡೆಯಲಿದ್ದು, 15ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಂಜಲಿ ನಿಂಬಾಳ್ಕರ್ ಅವರನ್ನೆ ಕಣಕ್ಕಿಳಿಸಲಾಗುತ್ತಿದೆ ಎನ್ನಲಾಗಿದೆ.

ಈಗಾಗಲೇ ಉತ್ತರಕನ್ನಡ ಲೋಸಭಾ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್, ರವೀಂದ್ರನಾಥ ನಾಯ್ಕ ಹಾಗೂ ನ್ಯಾಯವಾದಿ ಜಿ ಟಿ ನಾಯ್ಕ ಟಿಕೆಟ್‌ಗಾಗಿ ತೀವ್ರ‌ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಈಗಾಗಲೆ ರಾಜ್ಯ ಕಾಂಗ್ರೆಸ್ ‌ನಾಯ್ಕರು ನಾಳೆ ಅಭ್ಯರ್ಥಿ ಪಟ್ಟಿಯನ್ನ ಬಹುತೇಕವಾಗಿ ಪೈನಲ್ ಮಾಡುವ ಸಾಧ್ಯತೆ ಇದೆ. ಜಿಲ್ಲೆಯ ಈ ಮೂವರ ಪೈಕಿ ಅಂಜಲಿ ‌ನಿಂಬಾಳ್ಕರ್ ಅವರಿಗೆ ಟಿಕೆಟ್ ಘೋಷಣೆ ‌ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಿ ಎಂ ಸಿದ್ದರಾಮಯ್ಯ ಮತ್ತು ಡಿ ಸಿ ಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಾಳೆ ದಿಲ್ಲಿಗೆ ತೆರಳಲಿದ್ದಾರೆ. ಹೆಚ್ಚು-ಕಡಿಮೆ ನಾಳೆಯೇ ರಾಜ್ಯದ‌ 15ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡರೂ ಅಚ್ಚರಿ ಇಲ್ಲ.

ಇದನ್ನೂ ಓದಿ:-

ಸುರ್ಜೇವಾಲ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಳೆದು-ತೂಗಿ 10-15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಶಿಫಾರಸು ಮಾಡ ಲಾಗಿದೆ. ಈ ಪೈಕಿ ತುಸು ಗೊಂದಲ ಇರುವ ಹಾಗೂ ಪ್ರತಿಪಕ್ಷ ಬಿಜೆಪಿ 9 ಕಡೆ ಹಾಲಿ ಸಂಸದರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಈಗ ಕಾಂಗ್ರೆಸ್‌ ಲೆಕ್ಕಾಚಾರ ಬದಲಾಗಿದೆ. ಹಾಗಾಗಿ, ಅಂತಹ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ ಸಾಕಷ್ಟು ಅಳೆದುತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.


ಧಾರವಾಡ- ಲೋಹಿತ್‌ ನಾಯ್ಕರ್‌/ ರಜತ ಉಳ್ಳಾಗಡ್ಡಿಮಠ.
ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್‌,
ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ
ಚಿತ್ರದುರ್ಗ (ಮೀಸಲು)- ಬಿ.ಎನ್‌. ಚಂದ್ರಪ್ಪ,
ಕೋಲಾರ (ಮೀಸಲು)- ಕೆ.ಎಚ್‌. ಮುನಿಯಪ್ಪ,
ಬೆಳಗಾವಿ- ಮೃಣಾಲ್‌ ಹೆಬ್ಬಾಳ್ಕರ್‌,
ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ,
ಬಾಗಲಕೋಟೆ -ಸಂಯುಕ್ತ ಪಾಟೀಲ್‌/ ವೀಣಾ ಕಾಶಪ್ಪನವರ್‌,
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ,
ಬೆಂಗಳೂರು ಕೇಂದ್ರ- ಮನ್ಸೂರ್‌ಖಾನ್‌,
ಬೆಂಗಳೂರು ಉತ್ತರ- ಪ್ರೊ| ರಾಜೀವ್‌ ಗೌಡ,
ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ,
ಚಾಮರಾಜನಗರ- ದರ್ಶನ್‌ ಧ್ರುವನಾರಾಯಣ,
ಬೀದರ್‌- ರಾಜಶೇಖರ ಪಾಟೀಲ್‌ ಹುಮ್ನಾಬಾದ್‌,
ಮೈಸೂರು- ಲಕ್ಷ್ಮಣ/ಡಾ| ಯತೀಂದ್ರ,
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ