suddibindu.in
ಕಾರವಾರ: ಬಿಜೆಪಿ 400ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಅನಂತಕುಮಾರ್ ಅವರನ್ನ ಮೊದಲು ಅವರ ಪಕ್ಷದಿಂದ ಸಸ್ಪೆಂಡ್ ಮಾಡಬೇಕು ಎಂದಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡದ ಸಚಿವ ಮಂಕಾಳು ವೈದ್ಯ ಅವರು ಸಂವಿಧಾನ ಇರುವುದರಿಂದಲ್ಲೆ ನರೇಂದ್ರ ಮೋದಿ ಪ್ರಧಾನಿ ಆಗಿರೋದು, ಅನಂತಕುಮಾರ ಸಹ ಸಂಸದರಾಗಿರೋದು ಅದನ್ನ ಮೊದಲು ತಿಳಿದುಕೊಳ್ಳಬೇಕು.ಸಂವಿಧಾನ ತಿದ್ದುಪಡಿ ಮಾಡಲು 400ಸೀಟ್ ಬೇಕಾಗಿಲ್ಲ. 400 ಸೀಟ್ ಬರಬೇಕು ಎನ್ನುವುದನ್ನ ನೋಡಿದರೆ ಸಂವಿಧಾನ ತೆಗೆಯುವ ಉದ್ದೇಶ ಇವರದ್ದಾಗಿದೆ.ಬಿಜೆಪಿಯವರು ಇಂತಹ ಹೇಳಿಕೆ ಕೊಡುವವರನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ ಎಂದರೆ ಅವರ ಇಚ್ಚೆಯು ಸಂವಿಧಾನ ಬದಲಾವಣೆ ಮಾಡುವುದೆ ಆಗಿದೆ.
ಇದನ್ನೂ ಓದಿ:-
- ಭಟ್ಕಳದಲ್ಲಿ ಬೋಟ್ ದುರಂತ : ಅರಬ್ಬಿ ಸಮುದ್ರದಲ್ಲಿ 25ಮೀನುಗಾರರ ರಕ್ಷಣೆ
- ಅನ್ನ ಗಂಟಲಿಗೆ ಸಿಲುಕಿ ಯುವಕ ಸಾವು : ಕಾರವಾರದಲ್ಲಿ ನಡೆದ ಘಟನೆ
- ಉತ್ತರ ಕನ್ನಡದಲ್ಲಿ ಯೋಜನೆಗಳಿಗೆ ವಿರೋಧ ಮಾಡುವ ಡೊಂಗಿ ಹೋರಾಟಗಾರರು ಆಸ್ಪತ್ರೆಗಾಗಿ ಯಾಕೆ ಹೋರಾಡುತ್ತಿಲ್ಲ.?
ಸಂವಿಧಾನ ತೆಗೆದು ದೇಶವನ್ನು ಅಂಬಾನಿ ಅದಾನಿಗೆ ಕೊಡುವ ಉದ್ದೇಶ ಬಿಜೆಪಿಯವರು ಮಾಡಿಕೊಂಡಂತೆ ಇದೆ. ಅವರನ್ನ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುವುದಾದರೆ ಸಂವಿಧಾನ ಬದಲಿಸುವ ಉದ್ದೇಶ ಇರಬೇಕು.ಬಿಜೆಪಿ ನಾಯಕರ ಪ್ರೇರಣೆ ಇಲ್ಲದೆ ಇವರು ಮಾತನಾಡಿದ್ದಾರಾ.ನಮ್ಮ ಪಕ್ಷದಲ್ಲಿ ಇಂತಹ ಹೇಳಿಕೆ ನೀಡಿದ್ದರೆ ನಮ್ಮನ್ನ ಪಕ್ಷದಲ್ಲಿ ಇಡುತ್ತಿರಲಿಲ್ಲ.ನಾವು ಶಾಸಕರಾಗಿರುವುದು, ಅನಂತ್ ಕುಮಾರ್ ಹೆಗಡೆ ಸಂಸದರಾಗಿರುವುದು ಸಂವಿಧಾನದಿಂದಲೇ. ಸಂವಿಧಾನ ಬದಲಾವಣೆ ಮಾಡುವ ಇಂತಹವನ್ನ ಮೊದಲು ದೂರ ಇಡಬೇಕು ಎಂದಿದ್ದಾರೆ.