Former MLA’s car accident
suddibindu.in
ಮುಂಡಗೋಡ : ಉತ್ತರಕನ್ನಡ(uttarkannada) ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಡಗೋಡ ತಾಲೂಕಿನ ಹಾರವಳ್ಳಿ ಗ್ರಾಮದ ಬಳಿ ನಡೆದಿದೆ.
ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕರಾಗಿರುವ ವಿ ಎಸ್ ಪಾಟೀಲ್ ಅವರು ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ (car crashes into electric pole ) ಹೊಡೆದಿದೆ. ಅವರು ಬನವಾಸಿಯಿಂದ ಪಾಳಾ- ರಾಮಾಪುರ ಮಾರ್ಗವಾಗಿ ತಮ್ಮ ಗ್ರಾಮ ಅಂದಲಗಿಗೆ ತೆರಳುತ್ತಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಶಾಸಕ ವಿ. ಎಸ್. ಪಾಟೀಲರ ಎದೆಗೆ ಪೆಟ್ಟು ಬಿದ್ದು, ಕಾರು ಚಾಲಕ ಆನಂದ ಆಲೂರನ ಕಣ್ಣಿಗೆ ಗಾಯವಾಗಿದೆ.ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್(air bag )ಓಪನ್ ಆಗಿದ್ದರಿಂದ ಪ್ರಾಣಾಪಾಯದಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಗಾಯಗೊಂಡಿರುವ ಮಾಜಿ ಶಾಸಕರನ್ನ ಹಾಗೂ ಕಾರು ಚಾಲಕನಿಗೆ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ