suddibindu.in
Karwar : ಕಾರವಾರ: ಲೋಕಸಭಾ ಕ್ಷೇತ್ರದಲ್ಲಿನ (Lok Sabha Constituency) ಅಭಿವೃದ್ಧಿ ಹಾಗೂ ದೇಶದ ಹಿತದೃಷ್ಟಿಯಿಂದ ರಾಜ್ಯದ ನಾಲ್ಕೈದು ಬಿಜೆಪಿ ಸಂಸದರನ್ನ (BJP mp) ಬದಲಾವಣೆ ಮಾಡುವುದು ಎಲ್ಲಾ ರೀತಿಯಲ್ಲಿಯೂ ಸಹ ಒಳ್ಳೆಯ ಬೆಳವಣಿಗೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತ್ತಾಲಿಕ್ (Pramod Muthalik,)ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ಕಾರವಾರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರು ಉತ್ತರ ಕನ್ನಡದ ಹಾಲಿ ಸಂಸದರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರದಲ್ಲಿ ಓಡಾಟ ಮಾಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎನ್ನುವ ಆರೋಪ ಕೂಡ ಇದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತ್ತಾಲಿಕ್ ಅವರು ರಾಜ್ಯದಲ್ಲಿ ನಾಲ್ಕೈದು ಸಂಸದರು ಅವರಾಗಿಯೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಇಲ್ಲದೆ ಹೋದರೆ ಪಕ್ಷದವರು ಅಂತಹ ಸಂಸದರನ್ನ ಬಂದಲಾವಣೆ ಮಾಡುವುದು ಉತ್ತಮ. ಯಾರನ್ನ ಬದಲಾವಣೆ ಮಾಡಬೇಕು ಅಂತಾ ಆ ಸಂಸದರುಗಳು ಯಾರು ಎನ್ನುವುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ.ನಿಜವಾಗಲ್ಲೂ ಇವರಿಗೆಲ್ಲಾ ದೇಶ ಮೇಲೆ ಅಭಿಮಾನ ಅನ್ನೊಂದು ಇಲ್ಲ ಇವರಿಗೆಲ್ಲಾ ರಾಜಕಾರಣಕ್ಕಾಗಿ ಮಾತ್ರ ಹಿಂದೂತ್ವ ಭಾಷಣ ಮಾಡುತ್ತಾರೆ ವಿನಃ ದೇಶ ಪ್ರೇಮವಿಲ್ಲವೆಂದು ಮುತ್ತಾಲಿಕ್ ಸಂಸದರ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ಪರೇಶಮೇಸ್ತಾ ಸಾವಿಗೆ ನ್ಯಾಯ ಸಿಕ್ಕತ್ತಾ..?
ಹೊನ್ನಾವರದಲ್ಲಿ ಹಿಂದೂ ಯುವಕ ಪರೇಶಮೆಸ್ತಾ ಸತ್ತಾಗ ಎಲ್ಲರೂ ನ್ಯಾಯಕೊಡಿಸುವುದಾಗಿ ಬೊಬ್ಬೆ ಹೊಡೆದಿದ್ದರು. ಆ ಬಡಕುಟುಂಬಕ್ಕೆ ನಿಜವಾಗಲ್ಲೂ ನ್ಯಾಯ ಸಿಕ್ಕಿದೇಯಾ? ಇವರೆಲ್ಲಾ ಆ ಯುವಕನ ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ವಿನಃ ಬೇರೆ ಯಾವ ಉದ್ದೇಶವೂ ಇವರಿಗಿಲ್ಲ..ಹೆಣದ ಮೇಲೆ ರಾಜಕೀಯ ಮಾಡುವುದಕ್ಕೆ ನಾಚಿಕೆ ಆಗಬೇಕು. ಇನ್ನೂ ಕೂಡ ಆ ಪರೇಶಮೆಸ್ತಾ ಕುಟುಂಬ ಕಣ್ಣೀರು ಹಾಕುತ್ತಲ್ಲೆ ಇದ್ದಾರೆ..ಯಾರದೋ ಹೆಣದ ಮೇಲೆ ರಾಜಕಾರಣ ಮಾಡುವುದು ನ್ಯಾಯವಲ್ಲ