suddibindu.in
Kumta :ಕುಮಟಾ : ಟೋಲ್ (toll)ನಲ್ಲಿ ಫಾಸ್ಟ್ ಟ್ಯಾಗ್ (Fast tag)ತಾಂತ್ರಿಕ ಸಮಸ್ಯೆ ಉಂಟಾದ ಕಾರಣಕ್ಕೆ ಟೋಲ್ ಸಿಬ್ಬಂದಿಗಳು ರೌಡಿಗಳಂತೆ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ಕಾರಿನ(car) ಗಾಜು ಪುಡಿಪುಡಿ ಮಾಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66(National Highway 66)ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ನಡೆದಿದೆ.
ಇದನ್ನೂ ಓದಿ:-ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಹಾರ್ನ್ ಬಿಲ್ ಉತ್ಸವ
ಮಂಗಳೂರು (Mangalore)ಫಳ್ನೀರ್ ನಿವಾಸಿಗಳಾದ ಆಯಿಷಾ ರಾಮಲತ್ , ಫಾತಿಮಾ ಜೊಹಾರ, ಕೆ.ಮುಜೀಬ್ ಸೈಯ್ಯದ್ ಹಾಗೂ ಇನ್ನೂ ಕೆಲವರು ಮಂಗಳೂರಿನಿಂದ ಕಾರನಲ್ಲಿ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊಳೆ ಗದ್ದೆ ಟೋಲ್ ಗೇಟ್ ಗೆ ಕಾರು ಬಂದ ಸಂದರ್ಭದಲ್ಲಿ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿಲ್ಲ ಎನ್ನಲಾಗಿದೆ. ಇದೆ ಕಾರಣಕ್ಕೆ ಅಲ್ಲಿರುವ ಟೋಲ್ ಸಿಬ್ಬಂದಿಗಳು ಹಿಂದೆ ಮುಂದೆ ನೋಡದೆ ಕಾರನಲ್ಲಿದ್ದ ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ (attack)ಮಾಡಿದ್ದಾರೆ.
ಟೋಲ್ ಸಿಬ್ಬಂದಿಗಳಾಗಿರುವ ಕಿರಣ್, ಸತೀಶ್, ಮಂಜುನಾಥ್ ಸೇರಿದಂತೆ 5ಕ್ಕೂ ಹೆಚ್ಚು ಮಂದಿ ಸೇರಿ ಮುಜೀಬ್ ಅವರ ಮೇಲೆ ಹಲ್ಲೆ ನಡೆಸಿ ಅವರ ಪುತ್ರಿಯ ಕುತ್ತಿಗೆಗೆ ಕೈ ಹಾಕಿ, ಚಿನ್ನಾಭರಣ ಎಳೆದು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ಆಯಿಷಾ, ಫಾತಿಮಾ, ಮುಜೀಬ್ ಸೈಯದ್ ಕುಮಟಾ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.