ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರ ಕನ್ನಡ ಜಿಲ್ಲೆಗೆ ಅಗತ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕುಮಟಾದಲ್ಲಿ ಆಗಬೇಕೆಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು.

ಜಿಲ್ಲೆಯ ಕಾರವಾರ, ಶಿರಸಿ, ಯಲ್ಲಾಪುರ ಕ್ಷೇತ್ರದ ಶಾಸಕರುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಭೌಗೋಳಿಕವಾಗಿ ಜಿಲ್ಲೆಯನ್ನು ಎರಡು ವಿಭಾಗಗಳಲ್ಲಿ ವಿಗಂಡಿಸಿದರೆ ಘಟದ ಮೇಲ್ಭಾಗದಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಹೀಗೆ ಎರಡೂ ಕಡೆ ಆಸ್ಪತ್ರೆಯ ಅಗತ್ಯ ಇದೆ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯ ಪಟ್ಟರು. ಶಾಸಕ ಸತೀಶ ಸೈಲ್ ಕಾರವಾರದಲ್ಲಿ ಸಿರ್ಬಡ್ ನೌಕಾನೆಲೆ,ಕೈಗಾ ಅಣುವಿದ್ಯುತ್ ಸ್ಥಾವರ ಇದೆ ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ‌ ಕಾರವಾದ ಜನರಿಗೆ ಅನಾರೋಗ್ಯ ಉಂಟಾಗುತ್ತಿದೆ.

ಹೀಗಾಗಿ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜನ್ನ ‌ಮೊದಲು ಮೇಲ್ದರ್ಜೆ ಏರಿಸಬೇಕು. ನಂತರದಲ್ಲಿ ಜಿಲ್ಲೆಯ ಶಿರಸಿ ಅಥವಾ ಎಲ್ಲಿ ಬೇಕೋ ಅಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಾಡುವಂತೆ ಸಲಹೆ ನೀಡಿದ್ದರು.
ಇನ್ನೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಶಿರಸಿಯಲ್ಲಿ ಆಸ್ಪತ್ರೆ ಆದರೆ ಘಟ್ಟದ ಮೇಲ್ಭಾದಲ್ಲಿರುವ ಜನರಿಗೆ ಅನುಕೂಲವಾಗಲಿದೆ. ಎಲ್ಲವಾದ್ರೆ ನಮ್ಮ ಜನ ಸಹ ದೂರದ ಹುಬ್ಬಳ್ಳಿ ಇಲ್ಲ ಬೇರೆಕಡೆ ಹೋಗಬೇಕಾಗಿದೆ .

ಕುಮಟಾದಲ್ಲೆ ಆಸ್ಪತ್ರೆಗೆ ಜಾಗ ಇದೆ
ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಸ್ಥಳವನ್ನು ಗುರುತಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ , ರೈಲ್ವೆ ನಿಲ್ದಾಣ ಕೂಡ ಹತ್ತಿರದಲ್ಲೆ ಇದೆ. ಭೌಗೋಳಿಕವಾಗಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಮಟಾ ಮಧ್ಯವರ್ತಿ ಸ್ಥಳ ವಾಗಿರುವುದರಿಂದ ಜಿಲ್ಲೆಯ ಹಿತ ದೃಷ್ಟಿಯಿಂದ ಒಳಿತಾಗಲಿದೆ. ಅಲ್ಲದೆ ಹೆಚ್ಚಿನ ಜನರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಒತ್ತಾಯಿಸಿದರು.