ಬೆಂಗಳೂರು : ಹೈಸ್ಕೂಲ್ ಹುಡುಗನ ಜೊತೆ ಅದೆ ಶಾಲೆಯಲ್ಲಿ ಟೀಚರ್ ಲವ್ವಿಡವ್ವಿ, ವಿದ್ಯಾರ್ಥಿ ಕಾಲೇಜಿಗೆ ಹೋದ್ರು ಸೆಳೆದ ಮುಂದುವರೆದು.ವಿದ್ಯಾರ್ಥಿಯ ಜೊತೆ ಟೀಚರ್ ಪಾರ್ಕ್ ನಲ್ಲಿ ಸಲಿಗೆಯಲ್ಲಿರುವಾಗ ನಿಶ್ಚಿತಾರ್ಥವಾದ ಯುವಕನ ಕಣ್ಣಿಗೆ ಬಿದ್ದು, ಟೀಚರ್ ಸಹೋದರ ಅಪ್ರಾಪ್ತ ಬಾಲಕನ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಹೈಸ್ಕೂಲ್ ನ ಅಪ್ರಾಪ್ತ ಬಾಲಕನೋರ್ವನ ಅದೆ ಶಾಲೆಯ ಟೀಚರ್ ರಿಂದ ಬಾಲಕನ ಮೇಲೆ ಕ್ರಷ್ ಆಗಿತ್ತಿ .ಇಬ್ಬರೂ ಸಹ ಪೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ನಂತರ ಆ ವಿದ್ಯಾರ್ಥಿ ಹೈಸ್ಕೂಲ್ ಪಾಸ್ ಆಗಿ ಕಾಲೇಜಿಗೆ ಹೋಗಿದ್ದು.ಕಾಲೇಜಿಗೆ ಹೋದರೂ ಸಹ ಟೀಚರ್ ಜೊತೆಗೆ ನಿರಂತರವಾಗಿರುವ ಸಂಪರ್ಕದಲ್ಲಿ ಇರುತ್ತಿದ್ದರು.ಆಗಾಗ ಪೋನ್ ನಲ್ಲಿ ಮಾತನಾಡುವುದು, ಭೇಟಿಯಾಗುವುದು ನಡೆಯುತ್ತಲೆ ಇತ್ತು ಎನ್ನಲಾಗಿದೆ.
ಕಳೆದ ತಿಂಗಳು ಒಂದರಂದು ವಿದ್ಯಾರ್ಥಿಯ ಹುಟ್ಟುಹಬ್ಬ ಇದ್ದು, ಈ ವೇಳೆ ಅದೆ ಟೀಚರ್ ವಿದ್ಯಾರ್ಥಿಗೆ ಪೋನ್ ಮಾಡಿ ಕರೆಸಿಕೊಳ್ಳುತ್ತಾರೆ. ಬಳಿಕ ಇಬ್ಬರೂ ದೇವಸ್ಥಾನ ಒಂದರಲ್ಲಿ ಪೂಜೆ ಮಾಡಿ ಬಳಿಕ ಇಬ್ಬರೂ ಪಾರ್ಕಗೆ ಹೋಗಿ ಇಬ್ಬರೂ ಸಲುಗೆಯಿಂದ ಕುಳಿತಿರುತ್ತಾರೆ.ಈ ವೇಳೆ ಟೀಚರ್ ಜೊತೆ ನಿಶ್ಚಿತಾರ್ಥವಾಗಿದ್ದ ಯುವ ಟೀಚರ್ ಇನ್ನೊಬ್ಬ ಬೇರೊಬ್ಬ ಯುವಕನ ಜೊತೆ ಪಾರ್ಕ್ ನಲ್ಲಿ ಇರುವುದನ್ನ ನೋಡಿ ತಕ್ಷಣ ಟೀಚರ್ ಸಹೋದರನಿಗೆ ಪೋನ್ ಮಾಡಿ ನಿಮ್ಮ ತಂಗಿ ಪಾರ್ಕ್ ನಲ್ಲಿ ಬೇರೊಬ್ಬ ಯುವಕನ ಜೊತೆ ಇದ್ದಾಳೆ ಎಂದು ಹೇಳಿದ್ದು, ತಕ್ಷಣ ಸ್ಥಳಕ್ಕೆ ಬಂದ ಯುವತಿಯ ಅಣ್ಣ ತಂಗಿಯ ಜೊತೆ ಪಾರ್ಕ್ ನಲ್ಲಿ ಇದ್ದ ಯುವಕನ ಮೇಲೆಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಹಲ್ಲೆಗೆ ಒಳಗಾದ ಬಾಲಕ ಮರುದಿನ ಘಟನೆಯ ಬಗ್ಗೆ ಪಾಲಕರ ಗಮನಕ್ಕೆ ತಂದಿದ್ದು, ಈ ಬಗ್ಗೆ ಬಾಲಕನ ಪಾಲಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿದ್ದು, ನನ್ನ ಮಗ ಅಪ್ರಾಪ್ತನಾಗಿದ್ದು, ಟೀಚರ್ ಅವರೆ ನಮ್ಮಮಗನ ತೆಲೆ ಕೆಡಿಸಿದ್ದಾರೆ. ಹಾಗೂ ಬಾಲಕನ ಮೇಲೆ ಹಲ್ಲೆ ಮಾಡಿದವನ್ನ ಬಂಧನ ಮಾಡಬೇಕು ಎಂದು ಬಾಲಕನ ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.