ಸುದ್ದಿಬಿಂದು ಬ್ಯೂರೋ
ಕುಮಟಾ: ಪಟ್ಟಣದ ಮಸೀದಿ ಯೊಂದರ ಮೌಲಾನನೋರ್ವ ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಬಗ್ಗೆ ಕುಮಟಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳದ ಮೌಲಾನ ಅಬ್ಬುಸ್ ಸಮದ್ ಜಿಯಾಯಿ (25) ಎಂಬುವವರ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಸೆ. 23ರ ರಾತ್ರಿ 8 ಗಂಟೆ ಸುಮಾರಿಗೆ ಮತ್ತು ಕೆಲ ದಿನಗಳ ಹಿಂದೆಯೂ ಖುರಾನ್ ಓದಲು ಬಂದ ಬಾಲಕನ ಬಟ್ಟೆ ಕಳಚಿ, ಗುಪ್ತಾಂಗ ಸ್ಪರ್ಶಿಸಿ, ಲೈಂಗಿಕ ದೌರ್ಜನ್ಯ ವೆಸಗಲಾಗಿದೆ ಎಂದು ಬಾಲಕನ ತಂದೆ ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಕುಮಟಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ಬಳಿಕ ಆರೋಪಿಯನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಧರ್ಮಗುರುಗಳ ಸ್ಥಾನದಲ್ಲಿರುವ ಮೌಲಾನ ಖುರಾನ ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ಈ ರೀತಿಯ ಲೈಂಗಿಕ ದೌರ್ಜನ್ಯ ವೆಸಗಿದರೆ, ಮಸೀದಿ ಹಾಗೂ ಧರ್ಮಗುರುಗಳ ಮೇಲೆ ಅಪವಿಶ್ವಾಸ ಮೂಡುವಂತಾಗುತ್ತದೆ. ಇಂಥ ಮೌಲಾನಾಗೆ ತಕ್ಕ ಸಾಸ್ತಿ ಮಾಡಬೇಕೆಂದು ಮುಸ್ಲಿಂ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.