ಸುದ್ದಿಬಿಂದು ಬ್ಯೂರೋ
ಕಾರವಾರ : ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ರಾತ್ರಿ ಸಮಯದಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಬಳಿ ಇನ್ನೋರ್ವ ವ್ಯಕ್ತಿ ಮಲಗುವ ನೆಪದಲ್ಲಿ ಬಂದು ಮಲಗಿದ್ದ ವ್ಯಕ್ತಿ ಬಳಿಯಿದ್ದ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ಕಳ್ಳತ ಕೈಚಳ ಅಲ್ಲಿನ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನದ ಹಿಂದೆ ಹೆರಿಗೆ ವಾರ್ಡ್ ಬಳಿ ಹಲವರು ಮಲಗಿದ್ದು ಇನ್ನು ಕೆಲವರು ಕುರ್ಚಿ ಮೇಲೆ ಕುಳಿತು ಮಾತನಾಡತೊಡಗಿದ್ದರು. ಇದೇ ವೇಳೆ ಆಗಮಿಸಿದ ಕಳ್ಳನೋರ್ವ ತಾನು ಮಲಗುವ ನೆಪ್ಪದಲ್ಲಿ ಮಲ್ಲವಿದ್ದ ವ್ಯಕ್ತಿ ಬಳಿ ಇದ್ದ ಮೊಬೈಲ್ ಕಳ್ಳನ ಮಾಡಿ ಪರಾರಿಯಾಗಿದ್ದಾನೆ. ಬೆಳಿಗ್ಗೆ ಎದ್ದು ನೋಡಿದಾಗ ಮೊಬೈಲ್ ಇಲ್ಲದೆ ಇರುವುದನ್ನ ಕಂಡು ದಂಗಾದ ವ್ಯಕ್ತಿ ಸಿಬ್ಬಂದಿಗೆ ತಿಳಿಸಿದ್ದಾರೆ.
ಬಳಿಕ ಸಿಸಿ ಟಿವಿ ಪರಿಶೀಲನೆ ಮಾಡಿದಾಗ ಕಳ್ಳನೋರ್ವ ಮೊಬೈಲ್ ಎಗರಿಸಿರುವುದು ಪತ್ತೆಯಾಗಿದೆ. ಬಳಿಕ ಮೊಬೈಲ್ ಕಳೆದುಕೊಂಡವರು ಪೊಲೀಸ್ ದೂರು ನೀಡಿದ್ದಾರೆ ಎನ್ನಲಾಗಿದೆ.