ಸುದ್ದಿಬಿಂದು ಬ್ಯುರೋ
ಕಾರವಾರ :
ಮತ ಏಣಿಕೆ ಪೂರ್ವ ಸುದ್ದಿಬಿಂದು ವೆಬ್ ನ್ಯೂಸ್ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಪಕ್ಷಗಳು ಗೆಲುವು ಸಾಧಿಸಲಿದೆ ಎನ್ನುವ ಬಗ್ಗೆ , ಜಿಲ್ಲೆಯಲ್ಲಿ ಬಿಜೆಪಿಗೆ ಮರ್ಮಾಘಾತ ಎಂದ ಶೀರ್ಷಿಕೆಯಡಿಯಲ್ಲಿ ವರದಿ ಮಾಡಿ ಅದು ಈಗ ಪಕ್ಕಾ ಆಗಿದೆ.

ಭಟ್ಕಳದಲ್ಲಿ ಕಾಂಗ್ರೆಸ್ ನಿಂದ ಮಂಕಾಳು ವೈದ್ಯ, ಕಾರವಾರದಲ್ಕಿ ಕಾಂಗ್ರೆಸ್ ನ ಸತೀಶ್ ಸೈಲ್, ಹಳಿಯಾಳದಲ್ಲಿ ಕಾಂಗ್ರೆಸ್ ನಿಂದ ಆರ್ ವಿ ದೇಶಪಾಂಡೆ ಹಾಗೂ ಶಿರಸಿಯಲ್ಲಿ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಮ ಗೆಲುವು ಸಾಧಿಸಲಿದ್ದು, ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಎರಡನೇ ಭಾರಿ ಗೆಲುವಾಗಲಿದ್ದು, ಇನ್ನೂ ಕುಮಟಾದಲ್ಲಿ ಜೆಡಿಎಸ್ ಗೆಲ್ಲುವು ಸಾಧಿಸಲಿದೆ ಎಂದು ಮತ ಏಣಿಕೆ ಪೂರ್ವ ಸಮೀಕ್ಷೆ ನಡೆಸಲಾಗಿತ್ತು.

ಸುದ್ದಿ ಬಿಂದು ನಡೆಸಿದ ಸಮೀಕ್ಷೆಯಂತೆ ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ದಡಕ್ಕೆ ಬಂದು 673 ಅಲ್ಪ ಮತಗಳಿಂದ ಜೆಡಿಎಸ್ ಗೆ ಸೋಲಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಸುದ್ದಿಬಿಂದು ವೆಬ್ ನ್ಯೂಸ್ ನಡೆಸಿದ ಸಮೀಕ್ಷೆ ಪಕ್ಕಾ ಆಗಿದ್ದು, ಅನೇಕರು ಸಮೀಕ್ಷೆ ಪಕ್ಕಾ ಆಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.