ಮಂಗಳೂರು : ಬಿಹಾರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದ ನಾಲ್ವರನ್ನ ರಾಷ್ಟ್ರೀಯ ತನಿಖಾದಳ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ನಂದಾವರದಲ್ಲಿ ಬಂಧಿಸಲಾಗಿದೆ.

ಬಂಧಿತರು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹಣಕಾಸಿನ ನೆರವು ಪಡೆದಿದ್ದರು ಎನ್ನಲಾಗಿದೆ‌. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಸರ್ಫಾಜ್ ನವಾಜ್, ಮಹಮ್ಮದ್ ಸಿನಾನ್, ನೌಫಾಲ್ ಇಕ್ಬಾಲ್ ಎಂಬುವವರನ್ನ NIA ತಂಡ ಬಂಧಿಸಿದೆ.

ಇವರುಗಳ ಬ್ಯಾಂಕ್ ಖಾತೆಗಳಿಗೆ ಕಳೆದ ಅನೇಕ ದಿನಗಳಿಂದ ಹಣ ರವಾನೆ ಆಗುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ಆಧರಿಸಿ ತನಿಖಾ ತಂಡ ಇವರ ಹಣಕಾಸಿನ ವ್ಯವಹಾರ ಬಗ್ಗೆ ಗಮನಹರಿಸಿತ್ತು. ವಶಕ್ಕೆ ಪಡೆದಿರುವ ನಾಲ್ವರನ್ನ ತೀವೃವಿಚಾರಣೆಗೆ ಒಳಪಡಿಸಲಾಗಿದೆ.

ಇನ್ನೂ ಅನೇಕರ ಮೇಲೆ NIA ತಂಡ ಕಣ್ಣಿಟ್ಡಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನದಲ್ಲಿ ಪ್ರಕಣಕ್ಕೆ ಸಂಧಿಸಿದಂತಡ ಮತ್ತಷ್ಟು ಆರೋಪಿಗಳನ್ನ ಬಂಧನ ಮಾಡುವ ಸಾಧ್ಯತೆ ಇದೆ.