ಫೆಬವರಿ ತಿಂಗಳಿನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಚಿನ್ನದ ದರ ಹೆಚ್ಚಾದರೂ, ಖರೀದಿಯಲ್ಲಿ ಯಾವುದೇ ಕುಸಿತವಾಗಿಲ್ಲ; ಜನರು ಆಭರಣಗಳ ಬದಲಾಗಿ ಚಿನ್ನದ ಗಟ್ಟಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಆಭರಣಗಳ ಬೆಲೆ ಗಗನಕ್ಕೇರುತ್ತಿದೆ. ಚಿನ್ನದ ಆಭರಣ ಖರೀದಿದಾರರು ಮತ್ತು ಹೂಡಿಕೆದಾರರು ದೈನಂದಿನ ದರಗಳನ್ನು ತಿಳಿಯಲು www.sudibindu.in ವೆಬ್ಸೈಟ್ ಅನುಸರಿಸಿ.
ಬೆಂಗಳೂರು: ಮತ್ತೆ ಏರಿದ ಚಿನ್ನದ ದರ
22 ಕ್ಯಾರೆಟ್ 1 ಗ್ರಾಂ ಚಿನ್ನದ ದರ 8,000ರೂ ಗಡಿ ದಾಟಿಲ್ಲ, ಆದರೆ ಹಾವು-ಏಣಿ ಆಟದಂತೆ ಏರುತ್ತಾ ಇಳಿಯುತ್ತಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 300ರೂ ಏರಿಕೆಯಾಗಿದೆ.
ಇಂದು ಚಿನ್ನದ ದರ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 18ರಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ 30ರೂ ಏರಿಕೆಯಾಗಿದೆ. ಆದ್ದರಿಂದ, ಇಂದಿನ ದರ 7,970/ಗ್ರಾಂ. 24 ಕ್ಯಾರೆಟ್ ಚಿನ್ನ 33ರೂ ಏರಿಕೆಯಾಗಿ, ಪ್ರತಿ ಗ್ರಾಂ 8,695ರೂ,ಗೆ ತಲುಪಿದೆ.
10 ಗ್ರಾಂ ಚಿನ್ನದ ದರ ಎಷ್ಟು?
22 ಕ್ಯಾರೆಟ್ (10 ಗ್ರಾಂ) 79,700ರೂಪಾಯಿ ಆಗಿದೆ. 24 ಕ್ಯಾರೆಟ್ (10 ಗ್ರಾಂ) –86,950ರೂ ಸೋಮವಾರದಿಂದ ಮಂಗಳವಾರದ ವರೆಗೆ
ಚಿನ್ನದ ಬೆಲೆಯಲ್ಲಿ ₹300ಮತ್ತು ಶುದ್ಧ ಚಿನ್ನದ ಬೆಲೆಯಲ್ಲಿ ₹330 ಏರಿಕೆಯಾಗಿದೆ.
ದರ ಏರಿಕೆಗೆ ಏನು ಕಾರಣ?
ಫೆಬ್ರವರಿ 1ರಂದು ಚಿನ್ನದ ಬೆಲೆ ₹7,745 ಆಗಿದ್ದು, ಫೆಬ್ರವರಿ 18ಕ್ಕೆ ₹7,970 ತಲುಪಿದೆ.ಬಂಡವಾಳ ಮಾರುಕಟ್ಟೆಯಲ್ಲಿ ಇತರ ಷೇರುಗಳು ಕುಸಿದರೂ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಅಮೆರಿಕಾದ ಹೊಸ ಆರ್ಥಿಕ ನೀತಿಗಳ ಪರಿಣಾಮದಿಂದ ಚಿನ್ನದ ದರ ಏರಿದೆ.
ಚಿನ್ನದ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಚಿನ್ನದ ಖರೀದಿಯನ್ನು ಹೆಚ್ಚಿಸಿದ್ದಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿಯ ದರ ಹೇಗೆ ನಿರ್ಧರಿಸಲಾಗುತ್ತದೆ? ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿ ಆಮದು ಸುಂಕ ಮತ್ತು ಡಾಲರ್ ವಿರುದ್ಧದ ರೂಪಾಯಿ ಮೌಲ್ಯಪ್ರತಿದಿನದ ಚಿನ್ನ-ಬೆಳ್ಳಿ ದರ ನಿರ್ಧಾರಕ್ಕೆ ಮೇಲ್ಕಂಡ ಅಂಶಗಳು ಪರಿಣಾಮ ಬೀರುತ್ತಿವೆ.