ಸುದ್ದಿಬಿಂದು ಬ್ಯೂರೋ ವರದಿ (Suddibindu digital news)
ಬಂಟ್ವಾಳ, ಫೆಬ್ರವರಿ 4: ಇತ್ತೀಚೆಗೆ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ ಕಾಂಗ್ರೆಸ್ ನಾಯಕ ಬೊಂಡಾಳ ಚಿತ್ತರಂಜನ್ ಶೆಟ್ಟಿ,ಆಕಸ್ಮಿಕವಾಗಿ ಮಿಸ್ ಫೈರಿಂಗ್ ಆಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಬೊಂಡಾಳ ಚಿತ್ತರಂಜನ್ ಶೆಟ್ಟಿ, ಹಿಂದೆ ಇಂಟಕ್ ಸಂಸ್ಥೆ ಜೊತೆ ಗುರುತಿಸಿಕೊಂಡಿದ್ದ ಅವರು, ವಿಟ್ಲ ಸಮೀಪ ಅನಂತಾಡಿಯ ಕಲ್ಲುಗಣಿಯ ಬಳಿ ಗುಂಡೇಟಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಅವರು ಪರವಾನಗಿ ಪಡೆದ ರಿವಾಲ್ವರ್ ಇಟ್ಟುಕೊಂಡಿದ್ದರು.
ಚಿತ್ತರಂಜನ್ ಶೆಟ್ಟಿ ಅನಂತಾಡಿಯ ಕಲ್ಲುಗಣಿಯ ಸಮೀಪ ತೆರಳಿದಾಗ ಈ ಘಟನೆ ಸಂಭವಿಸಿದೆ. ಅಲ್ಲಿ ಏನಾಯಿತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅವರೇ ತಮ್ಮ ರಿವಾಲ್ವರ್ನಿಂದ ತಪ್ಪಾಗಿ ಗುಂಡು ಹಾರಿಸಿಕೊಂಡಿದ್ದು, ಇದರಿಂದ ತೊಡೆಯಲ್ಲಿ ಗಂಭೀರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಅವರಿಗೆ ಮಂಗಳೂರು ಆದ್ಯಾರ್ ಪಾಪ್ಯುಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಿಸ್ ಫೈರಿಂಗ್ ಘಟನೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ