ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಇಲ್ಲಿನ ಮುರುಡೇಶ್ವರದ ಕಡಲತೀರದಲ್ಲಿ ಕಳೆದ ಡಿಸೆಂಬರ್ 10ರಂದು ನಾಲ್ವರು ಪ್ರವಾಸಿ ವಿದ್ಯಾರ್ಥಿನಿಯರು ಸಾವನ್ನಪ್ಪಿದ ಬಳಿಕ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದ್ದ ಮುರುಡೇಶ್ವರ ಕಡಲತೀರ ಇಂದು ತೆರೆದುಕೊಳ್ಳುವ ಮೂಲಕ ಪ್ರವಾಸಿಗರಿಗೆ ಮುಕ್ತವಾಗಿದೆ.
ಡಿಸೆಂಬರ್ 10ರಂದು ಕೋಲಾರದ ಮುಳಬಾಗಿಲು ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ವೇಳೆ ಕಡಲತೀರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.ಬಳಿಕ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿತ್ತು.ಇನ್ನೂ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಇಲ್ಲಿಗೆ ಬಂದ ಲಕ್ಷಾಂತರ ಪ್ರವಾಸಿಗರು ಕಡಲಿಗೆ ಇಳಿಯಲಾಗದೆ ನಿರಾಶೆಯಿಂದ ವಾಪಸ್ ಆಗದ್ದು,ಕ್ರಿಸ್‌ಮಸ್ ವೇಳೆಯಲ್ಲೇ ಕಡಲತೀರಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮಾಹಿತಿ ಅಧಿಕಾರಿ ವರ್ಗದಿಂದಲ್ಲೇ ಕೇಳಿಬಂದಿತ್ತು. ಅದನ್ನ ಅಲ್ಲಿಗೆ ಕೈ ಬಿಡಲಾಗಿತ್ತು. ಇದರಿಂದಾಗಿ ಈ ಬಾರಿ ಕ್ರಿಸ್‌ಮಸ್ ಹಾಗೂ ಹೊಸವರ್ಷಾಚರಣೆ ಮುರುಡೇಶ್ವರ ಕಡಲತೀರದಲ್ಲಿ ಕಳೆ ಕಳೆದುಕೊಂಡಿತ್ತು.
ಇದೀಗ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಎರಡು ಮುಕ್ತಾಯವಾಗಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದ ಬಳಿಕ ಜಿಲ್ಲಾಡಳಿತ ಇಂದು ಕಡಲತೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.ಹೊಸ ವರ್ಷದ ಮೊದಲ ದಿನವಾದ ಇಂದು ಸಂಜೆ ಸ್ಥಳೀಯ ಅಧಿಕಾರಿಗಳು ಕಡಲತೀರದಲ್ಲಿ ಹಾಕಲಾಗಿದ್ದ ಗೇಟ್ ತೆರೆಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿದ್ದ ಪ್ರವಾಸಿಗರು ಓಡೋಡಿ ಕಡಲತೀರಕ್ಕೆ ಪ್ರವೇಶಿಸಿ ಜಿಲ್ಲಾಡಳಿತ ಗುರುತು ಪಡಿಸಿದ ಸ್ಥಳದಲ್ಲಿ ಮೋಜು ಮಸ್ತಿ ಮಾಡುವ ಮೂಲಕ ಖುಷಿ ಪಟ್ಟಿದ್ದಾರೆ.
ಗಮನಿಸಿ