ಸುದ್ದಿಬಿಂದು ಬ್ಯೂರೋ ವರದಿ
Kumta:ಕುಮಟಾ: ತಾಲೂಕಿನ ಗೋಕರ್ಣದ ಮುಖ್ಯ ಬೀಚ್‌ನಲ್ಲಿ Gokarna beach)ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 45ರಿಂದ 50ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಶವ ಪತ್ತೆಯಾಗಿದ್ದು,ಮುಖದ ಭಾಗದಲ್ಲಿ ಅಲ್ಲಲ್ಲಿ ಗಾಯವಾಗಿದೆ. ಮೃತ ವ್ಯಕ್ತಿ ಬಿಳಿ ಬಣ್ಣದ ಶರ್ಟ್ ಹಾಕಿದ್ದು, ಜನಿವಾರ ಸಹ ಧರಿಸಿದ್ದಾನೆ. ಈತ ಸ್ಥಳೀಯ ವ್ಯಕ್ತಿಯೋ ಅಥವಾ ಬೇರೆಡೆಯಿಂದ ಪ್ರವಾಸಕ್ಕೆಂದು ಬಂದು ಮೃತಪಟ್ಟಿದ್ದಾನೋ ಎನ್ನುವುದು ತಿಳಿದು ಬಂದಿಲ್ಲ. ಮೃತ ದೇಹವನ್ನ ನೋಡಿದ ಸ್ಥಳೀಯರು ಆತ ಇವತ್ತೆ ಸಾವನ್ನಪ್ಪಿರಬಹುದೆಂದು ಅಂದಾಜಿಸಿದ್ದಾರೆ.
ಸದ್ಯ ಮೃತ ವ್ಯಕ್ತಿಯ ಶವವನ್ನ ಗೋಕರ್ಣ ಸರಕಾರಿ ಆಸ್ಪತ್ರೆಯವ ಶವಗಾರದಲ್ಲಿ ಇಡಲಾಗಿದೆ.. ಮಾಹಿತಿ ಬೇಕಾದಲ್ಲಿ ಗೋಕರ್ಣ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದಾಗಿದೆ.
ಗಮನಿಸಿ