Belagavi:ಬೆಳಗಾವಿ: ಉತ್ತರ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಓಂದಾದ ಸಿಂದನೂರ ತಾಲ್ಲೂಕಿನ ಅಂಭಾಮಠದ ಜಗನ್ಮಾತೆ ಶ್ರೀ ಬಗಳಾಮುಖಿ ಪೂಣ್ಯ ಕ್ಷೇತ್ರದಲ್ಲಿ ಶರಣ್ನವರಾತ್ರಿಯ ನಿಮಿತ್ತ ಮಹಾಲಯ ಅಮಾವಾಸ್ಯೆಯ ದಿನದಂದು ಗೋಕಾಕ ತಾಲ್ಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಶಿಷ್ಯರಿಂದ ವಿಶೇಷ ಪೂಜೆ ಮತ್ತು ಮಹಾಪ್ರಸಾದ ನೇರವೇರಿತು.

ವಿವಿದೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಪೂಜೆ ಸಲ್ಲಿಸಿ ದೇವಿ ದರುಶನ ಪಡೆದರು. ಇ ಸಂದರ್ಭದಲ್ಲಿ ದಾಸೋಹದ ಉಸ್ತುವಾರಿಗಳಾದ ವಿರೂಪಾಕ್ಷಯ್ಯ ಪೂಜೇರ ಹಾಗು ಶಿವಾನಂದ ಮುನೇಶ್ವರಮಠ ಅವರು ಮಾತನಾಡಿ ಶ್ರೀ ದೇವಿ ಮಹಿಮೆಯ ಬಗ್ಗೆ ಮತ್ತು ದೇವಿಯ ಪೂಣ್ಯ ಕ್ಷೇತ್ರದಲ್ಲಿ ಮಹಾಪ್ರಸಾದ ಮಾಡಲು ಅವಕಾಶ ನೀಡಿದ ಕಮೀಟಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಮೇಶ ಗಂಗಣ್ಣವರ ರಾಜು ಅರಳಿಕಟ್ಟಿ ಈರಪ್ಪ ಚಾಪಗಾಂವ ಮಲ್ಲಿಕಾರ್ಜುನ ಕೆ. ಶ್ರೀಕಾಂತ ಮೇಳೇಯ್ಯನವರ ರಮೇಶ ಹುದ್ದಾರ ಯೋಗೆಶ ಕಲ್ಲೆದ ಮಾಂತೇಶ ಪರವೈನವರ ಶ್ರವಣಕುಮಾರ ಮುನೇಶ್ವರಮಠ ಸೋಮನಾಥ ತೋರಣಗಟ್ಟಿ ಫಕ್ಕಿರಪ್ಪ ನೇಗಿನಹಾಳ ಉಪಸ್ಥಿತರಿದ್ದರು.

ಗಮನಿಸಿ