suddibindu.in
ಕುಮಟಾ : ತಾಲೂಕಿನ ಬಾಡ ಗ್ರಾಮದ ಜನತಾ ವಿದ್ಯಾಲಯದ ಹಿಂಬದಿಯಲ್ಲಿ ಚರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಬಾಡ ಗ್ರಾಮದ ಜನತಾ ವಿದ್ಯಾಲಯದ ಹಿಂಬದಿಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಗ್ರಾಮದೊಳಗೆ ಚಿರತೆ ನುಗ್ಗಿರುವುದನ್ನ ತಿಳಿದ ಬಾಡ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವ ಮಂಜುನಾಥ ನಾಯ್ಕ ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
- PSI/ಪಿಎಸ್ಐ ಪತ್ನಿ ಆತ್ಮಹತ್ಯೆ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
ಸ್ಥಳಕ್ಕೆ ಬಂದಿರುವ ಕುಮಟಾದ ಅರಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿರತೆ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ…ಕಳೆ ವರ್ಷ ಕೂಡ ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿರುವ ನಾಗರಾಜ್ ನಾಯ್ಕ (ಸೀತು ನಾಯ್ಕ) ಅವರ ಮನೆ ಒಳಗೆ ಚಿರತೆ ನುಗ್ಗಿ ಸಾಕಷ್ಟು ಆತಂಕ ಸೃಷ್ಠಿ ಮಾಡಿತ್ತು.. ಮತ್ತೆ ಇದೀಗ ಬಾಡ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.