suddibindu.in
ದಾಂಡೇಲಿ : ಬೆಳ್ಳಂ ಬೆಳಗ್ಗೆ ಎಮ್ಮೆಗಳನ್ನು ಮೇಯಿಸಲೆಂದು ಕಾಡಿಗೆ ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ, ಪವಾಡ ಸದೃಶ್ಯವಾಗಿ ಪಾರದ ಘಟನೆ ಬುಧವಾರ ಬೆಳಿಗ್ಗೆ ದಾಂಡೇಲಿ ತಾಲೂಕಿನ ನಾನಾಕೆಸರೋಡಾದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ನಾನಾಕೆಸರೋಡಾದ ನಿವಾಸಿ 56 ವರ್ಷ ವಯಸ್ಸಿನ ಮಹೇಶ ಜಾನು ಪಾಟೀಲ ಎಂಬವರೇ ಆನೆ ದಾಳಿಯಿಂದ ಗಾಯಗೊಂಡು ಬದುಕುಳಿದ ವ್ಯಕ್ತಿಯಾಗಿದ್ದಾರೆ. ಇವರು ಪತ್ನಿ ಸಮೇತರಾಗಿ ಬೆಳಿಗ್ಗೆ ಎಮ್ಮೆಗಳನ್ನು ಮೇಯಿಸಲೆಂದು ಮನೆ ಹತ್ತಿರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಕಾಡಾನೆವೊಂದು ಇವರ ಮೇಲೆ ದಾಳಿ ಮಾಡಿದೆ. ಆನೆ ದಾಳಿಯಿಂದ ಕೈಗೆ ಬಲವಾದ ಗಾಯವಾಗಿದೆ. ಇನ್ನುಳಿದಂತೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ
- ಕಾಸರಗೋಡು ಬಳಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಓರ್ವ ಕಾರ್ಮಿಕ ಸಾವು, ಹಲವರಿಗೆ ಗಾಯ
- ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜಕೀಯ ಸಮೀಕರಣ: ಕುಮಾರಸ್ವಾಮಿ ಸುಪ್ರಿಂ
- ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ — ಹೆದ್ದಾರಿ ತಡೆದು ಆಕ್ರೋಶ
ಆನೆ ದಾಳಿಯಿಂದ ಗಾಯಗೊಂಡಿದ್ದ ಇವರನ್ನು ಸ್ಥಳೀಯರು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಬರ್ಚಿ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಆಶೋಕ್ ಶೆಳ್ಳೆನ್ನವರ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಜಾಧವ್ ಭೇಟಿ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.







