suddibindu.in
Dandeliದಾಂಡೇಲಿ : ಕಾರು ಹಿಮ್ಮುಖವಾಗಿ ಚಲಿಸಿದ ಪರಿಣಾಮವಾಗಿ ಕಾರಿನ ಹಿಂದಿಯಲ್ಲಿ ಸ್ಕೂಟಿ (scooty) ಮೇಲೆ ಪ್ರಯಾಣಿಸುತ್ತಿದ್ದವರಿಗೆ ಡಿಕ್ಕಿ ಹೊಡೆದು ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಸಂಡೆ ಮಾರ್ಕೆಟ್ ಜೆ.ಎನ್ ರಸ್ತೆಯಲ್ಲಿ ನಡೆದಿದೆ.
ಕೆಎ: 25, ಎಂ.ಇ 1237 ನೊಂದಣಿ ಹೊಂದಿರುವ ಕಾರು ಸಂಡೆ ಮಾರ್ಕೆಟ್ ಮುಂಭಾಗದ ಜೆ.ಎನ್. ರಸ್ತೆಯಲ್ಲಿ ವೇಗವಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮವಾಗಿ ಅದೇ ವೇಳೆ ಚಲಿಸುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ವಾಹನದಲ್ಲಿದ್ದ ನಗರದ ಪಟೇಲ್ ನಗರದ ನಿವಾಸಿಗಳಾದ ಎಲಿಜಬೆತ್ ಅಬ್ರಾಹಂ ಕಲ್ವಕುರಿ ಹಾಗೂ ಅವರ ಪುತ್ರ ಯೇಸುದಾಸ್ ಅಬ್ರಾಹಂ ಕಲ್ವಕುರಿ ಅವರಿಬ್ಬರಿಗೆ ಗಂಭೀರ ಗಾಯವಾಗಿದೆ.
ಇದನ್ನೂ ಒಮ್ಮೆ ಓದಿ
- ಸ್ಮರಣೀಯ ಸೇವೆಯೊಂದಿಗೆ ವಿಶ್ರಾಂತ ಜೀವನಕ್ಕೆ ಅಡಿಯಿಡುತ್ತಿರುವ ಶಿಸ್ತಿನ ಶಿಕ್ಷಕ ಉಮೇಶ ನಾಯ್ಕ
- ನಾಳೆ ಜಿಲ್ಲೆಯ ಈ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಫ್ರೌಢ ಶಾಲೆಗಳಿಗೆ ರಜೆ
- ನಾಳೆ ಜಿಲ್ಲಾದ್ಯಂತ ಎಲ್ಲಾ ಅಂಗನವಾಡಿ, ಶಾಲೆ-ಕಾಲೇಜುಗಳು ಎಂದಿನಂತೆ ಆರಂಭ
ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಅಪಘಾತದಲ್ಲಿ ಎಲಿಜಬೆತ್ ಅಬ್ರಾಹಂ ಕಲ್ವಕುರಿ ಅವರಿಗೆ ಕಣ್ಣು, ಮುಖ, ತಲೆ, ಕೈಗೆ ಹಾಗೂ ಯೇಸುದಾಸ್ ಅಬ್ರಾಹಂ ಕಲ್ವಕುರಿ ಅವರಿಗೆ ಮುಖ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಇವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು (police station) ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.