suddibindu.in
ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ವರುಣನ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯವಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇನ್ನೂ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಭರ್ಜರಿ ಮಳೆಯಾಗಲಿದೆ.
ಜೂನ್ 11ರ ವರೆಗೆ ಅಧಿಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಗೆ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೆಲವು ಕಡೆಯಲ್ಲಿ ರಸ್ತೆಗಳ ಮೇಲ ಕೂಡ ನೀರು ತುಂಬಿ ಹರಿಯುತ್ತಿದ್ದೆ..
ಇದನ್ನೂ ಓದಿ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
- ಆಸ್ಪತ್ರೆಗೆ ಉಪಕರಣ ಕೊಡಿ, ನಂತರ ಉದ್ಘಾಟನೆಗೆ ಬನ್ನಿ: ಕಾಂಗ್ರೇಸ್ ಸರಕಾರಕ್ಕೆ ರೂಪಾಲಿ ನಾಯ್ಕ ಖಡಕ್ ಎಚ್ಚರಿಕೆ”
ಕುಮಟಾದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ನಿನ್ನಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆಯಿಂದ ಇದುವರೆಗೆ ಕುಮಟಾ ತಾಲೂಕು ಒಂದರಲ್ಲೆ ಅತೀ ಹೆಚ್ಚು 52.9 ಎಂಎಂ ಮಳೆ ದಾಖಲಾಗದೆ.





