suddibindu.in
ಕಾರವಾರ: ನಗರದಲ್ಲಿ ಚಿಕನ್ ದರ ಬೇಕಾಬಿಟ್ಟಿಗೆ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಚಿಕನ್ ಅಂಗಡಿಗಳ ಮೇಲೆ ಭಾನುವಾರ ದಾಳಿ ಮಾಡಿದ್ದಾರೆ.
- ಟೆಂಪೋ ಪಲ್ಟಿ: 16 ಕಾರ್ಮಿಕರಿಗೆ ಗಾಯ
- ಮಣಕಿ ಮೈದಾನದಲ್ಲಿ ಡಬಲ್ ಸ್ಟ್ಯಾಂಡರ್ಡ್! ಮಂಜು ಜೈನ್ ಆಕ್ರೋಶ!
- ನವೆಂಬರ್ 26ಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ..? ಡಾ.ಯತೀಂದ್ರಗೆ ಡಿಸಿಎಂ ಸ್ಥಾನ.!
ಅಂಕೋಲಾ, ಅವರ್ಸಾ, ಅಮದಳ್ಳಿ ಭಾಗದಲ್ಲಿ ಚಿಕನ್ ವರ್ತಕರು ಮಾರಾಟ ಮಾಡುವ ದರಕ್ಕಿಂದ ಸುಮಾರು 40 ರಿಂದ 50 ರೂಪಾಯಿ ಹೆಚ್ಚುವರಿ ಹಣವನ್ನ ಕಾರವಾರದಲ್ಲಿ ಚಿಕನ್ ಅಂಗಡಿ ಮಾಡಲಿಕರು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಟ್ರಾನ್ಸಪೊರ್ಟ್ ಚಾರ್ಜ್, ಇನ್ನಿತರ ಕಾರಣ ನೀಡಿ ತಾವು ನಿರ್ಧರಿಸಿದ್ದೆ ದರ ಎನ್ನುವಂತೆ ಮಾರಾಟ ಮಾಡುತ್ತಿದ್ದರು.
ಪ್ರತಿನಿತ್ಯ ಪಕ್ಷಾಂತರ ರೂಪಾಯಿ ಗ್ರಾಹಕರಿಂದ ಲೂಟಿ ಮಾಡುವ ಬಗ್ಗೆ ದೂರು ಕೇಳಿ ಬಂದ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ನಗರದಲ್ಲಿನ ಪ್ರತಿ ಚಿಕನ್ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗ್ರಾಹಕರಿಂದ ಹೆಚ್ಚುವರಿ ಹಣ ಸಂಗ್ರಹಿಸದೇ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ





