ಸಂಸದ ಅನಂತಕುಮಾರ ಹೆಗಡೆ ಅವರ ಹೆಸರನ್ನು ಬಳಸಿ ನಕಲಿ ಪೋಸ್ಟರ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಷ್ಟು ನೈತಿಕ ದಿವಾಳಿತನಕ್ಕೆ ಬಂದಿತೇ ಉತ್ತರಕನ್ನಡ ಬಿಜೆಪಿ. ಕಾಂಗ್ರೆಸ್ಸಿಗರು ಮಾಡುತ್ತಾರೆ ನಾವು ಮಾಡಿದರೆ ತಪ್ಪೇನು ಎಂದು ಸಮಾಜಯಿಷಿ ಕೊಡೋದಾದ್ರೆ ನಿಮಗೂ ಅವರಿಗೂ ವ್ಯತ್ಯಾಸವೇನು? ಅಂದಮೇಲೆ ಸುಸಂಸ್ಕೃತರ ಪಕ್ಷ ಎನ್ನುವ ಹೆಸರನಿಂದ ಜನರು ನಿಮ್ಮನ್ನು ಗುರುತಿಸಬೇಕೇ?
- Sowjanya./ಸೌಜನ್ಯ ಸಾವಿಗೆ ಮರು ಜೀವ : ತಾಯಿ ಕುಸುಮಾವತಿ ದೂರು
- ಅನನ್ಯಾ ನನ್ನ ಮಗಳಲ್ಲ : ಎಸ್ಐಟಿ ಎದುರು ಕಣ್ಣೀರು ಹಾಕಿದ ಸುಜಾತಾ ಭಟ್
- ರಸ್ತೆ ಬಿಟ್ಟು ಚಹಾ ಅಂಗಡಿಗೆ ಬಂದ ಬಸ್ : ಹೆಗಡೆ ರಸ್ತೆಯಲ್ಲಿ ಘಟನೆ
ಸಂಸದ ಸನ್ಮಾನ್ಯ ಅನಂತಕುಮಾರ ಹೆಗಡೆ ಅವರು ತಮ್ಮ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡುವ ಪೂರ್ವದಲ್ಲಿ ಈರೀತಿಯಾಗಿ ನಕಲಿ ಪೋಸ್ಟರ್ ಹಾಕುವ ಹಿಂದಿನ ಉದ್ದೇಶವಾದರೂ ಏನು? ಇದು ಫೇಕ್ ಎಂದು ಸಾಕ್ಷಿಸಮೇತ ಹೇಳಿದರೆ ಅಂತವರನ್ನು ಪಕ್ಷದ ವಾಟ್ಸಪ್ ಗಳಿಂದ ರಿಮೂವ್ ಮಾಡ್ತಾ ಇದ್ದೀರಿ. ಸತ್ಯಹೇಳುವವರು ನಿಮಗೆ ಬೇಡವೇ?
ಕಾಗೇರಿ ಗೆಲುವಿಗೆ ಅನಂತಕುಮಾರ ಹೆಗಡೆ ಅವರ ಸಹಕಾರ ಅಗತ್ಯವಿಲ್ಲ ಎಂದು ದೂರತಳ್ಳಿರುವ ನಿಮಗೆ ಈಗೇಕೆ ಅವರ ಹೆಸರುಬೇಕು? ಇಂತಹ ವಾಮಮಾರ್ಗಕ್ಕೆ ಇಳಿಯುವಬದಲು ನೇರವಾಗಿ ಹೋರಾಡಿ ಗೆದ್ದು ನಿಮ್ಮ ಗಂಡಸ್ತನವನ್ನು ತೋರಿಸಿ. ಅದನ್ನುಬಿಟ್ಟು ಇಂತಹ ಕಣ್ಣಾಮುಚ್ಚಾಲೆ ಆಟಗಳನ್ನಾಡುವ ಮೂಲಕ ಅನಂತಕುಮಾರ ಹೆಗಡೆ ಅವರ ಅಸಂಖ್ಯಾತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಡಿ.
@everyone