suddibindu.in
Kumta: ಕುಮಟಾ : ಗ್ರಾಮದೊಳಗೆ ನುಗ್ಗಿದ್ದ ಬಲಾಢ್ಯ ಚಿರತೆಯೊಂದು ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ನಿನ್ನೆ ರಾತ್ರಿಯಿಂದ ಮನೆ ಒಳಗೆ ಅವಿತುಕೊಂಡಿರುವ ಘಟನೆ ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ನಡೆದಿದೆ.
ಮಾದರಿ ರಸ್ತೆಯಲ್ಲಿ ನಿನ್ನೆ ಸಂಜೆ ರಾಜಾರೋಷವಾಗಿ ಬಂದ ಚಿರತೆ ಮಹಾಬಲೇಶ್ವರ ನಾಯ್ಕ ಅವರ ಮನೆ ಒಳಗೆ ಪ್ರವಾಸ ಮಾಡಿ ಅವರ ಮೇಲೆ ಹಲ್ಲೆ ಮಾಡಿತ್ತು. ಬಳಿಕ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನ ಬೋನಿಗೆ ಕೆಡವಲು ಅದೆಷ್ಟೆ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ನಿನ್ನೆ ರಾತ್ರಿಯಿಂದ ಚಿರತೆ ಮಹಾಬಲೇಶ್ವರ ಅವರ ಮನೆಯ ಕೋಣೆಯೊಂದರೊಳಗೆ ಸೇರಿಕೊಂಡಿದೆ.
ಇದನ್ನೂ ಓದಿ
- Staff Nurse/ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬಸ್ ನಿಲ್ದಾಣದಲ್ಲಿ ಮೃತಪಟ್ಟ ಭಿಕ್ಷುಕನ ಅಂತ್ಯಸಂಸ್ಕಾರ
- ಕಾರವಾರ ಕ್ರಿಮ್ಸ್ ನಿವೃತ್ತ ನಿರ್ದೇಶಕ ಗಜಾನನ ನಾಯಕನ ವಿರುದ್ಧ ಕ್ರಮಕ್ಕೆ ಸೂಚನೆ
ಇನ್ನೂ ಕೋಣೆಗೆ ಹೊರಗಡೆಯಿಂದ ಬೀಗ ಹಾಕಲಾಗಿದ್ದು, ಕೋಣೆಯೊಳಗೆ ಇರುವ ಚಿರತೆಯ ಚಲನವಲನ ಗಮನಿಸಲು ಮನೆಯ ಗೋಡೆಗೆ ರಂಧ್ರಕೊರೆಯಲಾಗಿದೆ.ಇದುವರೆಗೂ ಸಹ ಆ ಚಿರತೆಒಳಗಡೆಯಿಂದಲ್ಲೆ ಘರ್ಜನೆ ಮುಂದುವರೆಸಿದೆ. ಮಾದರಿ ರಸ್ತೆಯ ಸುತ್ತಮುತ್ತಲಿನ ಮನೆಯವರು ರಾತ್ರಿಯಿಂದ ಆತಂಕದಲ್ಲೇ ಕಾಲ ಕಳೆಯುತ್ತಿದ್ದು, ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ
ಇನ್ನೂ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದಿಂದ ಅರವಳಿಕೆ ತಜ್ಞರು ಬಾಡಕ್ಕೆ ಆಗಮಿಸುತ್ತಿದ್ದು, ಅವರು ಬಂದ ಬಳಿಕವೆ ಚಿರತೆ ಬೋನಿಗೆ ಬಿಳಬೇಕಿದೆ..ಸ್ಥಳದಲ್ಲೆ ಕುಮಟಾ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೆ ಬಿಡುಬಿಟ್ಟಿದ್ದಾರೆ.